ವೇಲ್‌ ಹಾಕಿಕೊಂಡು ಬಂದ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ಭಾರತೀಯ ರೆಸ್ಟೋರೆಂಟ್ ಮುಚ್ಚಿಸಿದ ಬಹ್ರೇನ್

ನವದೆಹಲಿ: ವೇಲ್‌ (veil) ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಕಾರಣ ಬಹ್ರೇನ್‌ನ ಅದ್ಲಿಯಾದಲ್ಲಿರುವ ರೆಸ್ಟೋರೆಂಟ್ ಅನ್ನು ಅಧಿಕಾರಿಗಳು ಮುಚ್ಚಿದ್ದಾರೆ ಎಂದು ದಿ ಡೈಲಿ ಟ್ರಿಬ್ಯೂನ್ ವರದಿ ಮಾಡಿದೆ.
ರೆಸ್ಟೋರೆಂಟ್‌ನ ಅಧಿಕೃತ ಸೈಟ್ ಇದು ಭಾರತೀಯ ರೆಸ್ಟೋರೆಂಟ್ ಎಂದು ಉಲ್ಲೇಖಿಸುತ್ತದೆ, ಇದು 1987 ರಿಂದ ಬಹ್ರೇನ್‌ನಲ್ಲಿದೆ.

ವೇಲ್‌ ಹಾಕಿಕೊಂಡು ಬಂದ  ಮಹಿಳೆಯನ್ನು ರೆಸ್ಟೋರೆಂಟ್ ಸಿಬ್ಬಂದಿ ತಡೆಯುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವು ಬಾರಿ ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ, ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರ (BTEA) ಈ ಸಮಸ್ಯೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತು ಮತ್ತು ಎಲ್ಲಾ ಪ್ರವಾಸೋದ್ಯಮ ಮಳಿಗೆಗಳನ್ನು ಮಾರ್ಗಸೂಚಿಗಳನ್ನು ಅನುಸರಿಸಲು ಮತ್ತು ದೇಶದ ಕಾನೂನನ್ನು ಉಲ್ಲಂಘಿಸದಂತೆ ಸೂಚಿಸಿದೆ.
ಜನರ ವಿರುದ್ಧ ತಾರತಮ್ಯ ಮಾಡುವ ಎಲ್ಲಾ ಕ್ರಮಗಳನ್ನು ನಾವು ತಿರಸ್ಕರಿಸುತ್ತೇವೆ, ವಿಶೇಷವಾಗಿ ಅವರ ರಾಷ್ಟ್ರೀಯ ಗುರುತಿನ ಬಗ್ಗೆ,” ಎಂದುಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರ (BTEA) ಉಲ್ಲೇಖಿಸಿ ಡೈಲಿ ಟ್ರಿಬ್ಯೂನ್ ವರದಿ ಮಾಡಿದೆ.

ಘಟನೆಯ ನಂತರ, ರೆಸ್ಟೋರೆಂಟ್ ಇನ್ಸ್ಟಾಗ್ರಾಂನಲ್ಲಿ ಕ್ಷಮೆಯಾಚನೆಯ ಹೇಳಿಕೆಯನ್ನು ಹಾಕಿತು ಹಾಗೂ ಘಟನೆಗೆ ವಿಷಾದ ವ್ಯಕ್ತಪಡಿಸಿತು. ರೆಸ್ಟೋರೆಂಟ್ ಕರ್ತವ್ಯದಲ್ಲಿದ್ದ ಮ್ಯಾನೇಜರ್‌ನನ್ನೂ ವಜಾ ಮಾಡಿದೆ.
ನಮ್ಮ ತನಿಖೆಯ ಆಧಾರದ ಮೇಲೆ ನಾವು ಕರ್ತವ್ಯದಲ್ಲಿದ್ದು ಮ್ಯಾನೇಜರ್‌ನನ್ನು ಅಮಾನತುಗೊಳಿಸಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನಾವು ಈಗ 35 ವರ್ಷಗಳಿಂದ ಈ ದೇಶದಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯತೆಗಳ ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಈ ನಿದರ್ಶನದಲ್ಲಿ, ಅಮಾನತುಗೊಳಿಸಲಾದ ಮ್ಯಾನೇಜರ್‌ನಿಂದ ತಪ್ಪಾಗಿದೆ ಎಂದು ರೆಸ್ಟೋರೆಂಟ್‌ನ ಹೇಳಿಕೆ ತಿಳಿಸಿದೆ.
ಇದೇ ವೇಳೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಘಟನೆಗಳ ಬಗ್ಗೆ ವರದಿ ಮಾಡುವಂತೆ ಬಿಟಿಇಎ ಸಾರ್ವಜನಿಕರಿಗೆ ಕರೆ ನೀಡಿದೆ.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement