ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್..!

posted in: ರಾಜ್ಯ | 0

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಮಾಹಿತಿ ಹೇಳಿದ್ದಾರೆ.

ಹಾಸನದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್​.ಡಿ.ರೇವಣ್ಣ, ನಮ್ಮ ತಾಯಿಗೆ ಐಟಿ ಅಧಿಕಾರಿಗಳಿಂದ ನೋಟಿಸ್​ ಬಂದಿದೆ. . ಆಸ್ತಿ ವಿವರದ ಮಾಹಿತಿ ಕೋರಿದ್ದಾರೆ ಎಂದು ತಿಳಿಸಿದ್ದಾರೆ.

ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಹೀಗೆ ಮಾಡ್ತಾರಾ? ದೊಡ್ಡಪುರದ ಬಳಿ ನಮ್ಮ ತಾಯಿ ಹೆಸರಿನ ಜಮೀನಿನಲ್ಲಿ ಕಬ್ಬು ಬೆಳೆದಿದ್ದೇವೆ. ಅಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿ ನೋಟಿಸ್ ನೀಡಿದ್ದಾರೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ನಾನು ಆಲೂಗಡ್ಡೆ ಬೆಳೆದಿದ್ದೆ, ಈಗ ಕಬ್ಬು ಬೆಳೆದಿದ್ದೇನೆ. ನಮ್ಮ ಜಮೀನಿನಲ್ಲಿ ನಾವು ಕಬ್ಬು ಬೆಳೆಯುತ್ತೇವೆ. ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ. ಅದನ್ನು ನೋಡಬೇಕು ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಅದಕ್ಕೆ ಉತ್ತರ ಕೊಡುತ್ತೇವೆ. ಆದರೆ ಐಟಿ ಅಧಿಕಾರಿಗಳು ನಮ್ಮ ಜಮೀನಿಗೆ ಬಂದು ನೋಡಬೇಕು. ಅಧಿಕಾರಿಗಳು ನೂರಾರು ಕೋಟಿ ಮಾಡುತ್ತಿದ್ದಾರೆ ಅವರನ್ನ ಬಿಟ್ಟು ಓರ್ವ ಮಾಜಿ ಪ್ರಧಾನಿ ಮನೆಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓದಿರಿ :-   ಬಾಗಲಕೋಟೆ: ತಲೆಗೂದಲಿಗೆ ಬಣ್ಣ ಹಾಕುವ ದರದ ವಿಚಾರದಲ್ಲಿ ಜಗಳ, ಗ್ರಾಹಕನ ಎದೆಗೆ ಇರಿದು ಕೊಲೆ ಮಾಡಿದ ಕ್ಷೌರಿಕ

ಹಣ ಮಾಡುವುದಾದರೆ ಆಸ್ತಿ ಮಾಡುವುದಾಗಿದ್ದರೆ ಹಾಸನದಲ್ಲಿ ಎಷ್ಟು ಬೇಕಾದರೂ ಮಾಡಬಹುದಿತ್ತು. ಅಂತಹ ಕೆಲಸ ನಾನು ಮಾಡಿಲ್ಲ. ನಾನು ದ್ವೇಷದ ರಾಜಕಾರಣ ಮಾಡಿಲ್ಲ. ಐಟಿ ನೋಟಿಸ್​ಗೆ ಉತ್ತರ ಕೊಡ್ತೀವಿ. ಆದರೆ ಆರ್​ಟಿಒ ಆಫೀಸರ್ ನೂರು-ಇನ್ನೂರು ಕೋಟಿ ರೂ. ಮಾಡಿದ್ದಾರೆ. ಅವರಿಗೇಕೆ ನೋಟಿಸ್ ಕೊಟ್ಟಿಲ್ಲ? ನಮ್ಮ ಗದ್ದೆಗೆ ಬಂದು ಕಬ್ಬಿನ ಬೆಳೆ ನೋಡಿ ಎಂದು ಐಟಿ ಅಧಿಕಾರಿಗಳಿಗೆ ಹೇಳಿದ್ದೇವೆ. ಕಬ್ಬು ಕಟಾವು ಮಾಡಿದ ಮೇಲೆ ಬೆಳೆ ಎಲ್ಲಿ ಹೋಯಿತು ಎಂದು ಕೇಳುವುದು ಬೇಡ ಎಂದು ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ