ಪಾಕಿಸ್ತಾನ: ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು, ಸೋಮವಾರ ಪಾಕ್ ಸಂಸತ್‍ನಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ.

ಅವಿಶ್ವಾಸ ನಿರ್ಣಯಕ್ಕೆ 161 ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಎರಡೂ ಡಜನ್‍ಗೂ ಹೆಚ್ಚು ಸಂಸದರ ಬಂಡಾಯ ಎದ್ದು ವಿಪಕ್ಷಗಳ ಜೊತೆ ಕೈಜೋಡಿಸಿದ್ದಾರೆ ಎಂದು ಹೇಳಲಾಗಿದೆ. ಈಗ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದೆ. ಅಲ್ಲದೆ ಪಾಕಿಸ್ತಾನದ ಸೈನ್ಯ ಸಹ ಇಮ್ರಾನ್‌ ವಿರುದ್ಧ ತಿರುಗಿ ಬಿದ್ದಿದೆ ಎನ್ನಲಾಗಿದೆ.ಹೀಗಾಗಿ ಒಂದು ವಾರದ ಒಳಗೆ ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.

342 ಸ್ಥಾನಗಳ ಪೈಕಿ ಬಹುಮತಕ್ಕೆ 172 ಸ್ಥಾನಗಳು ಅವಶ್ಯಕತೆ ಇದೆ. ಲೆಕ್ಕಾಚಾರದ ಪ್ರಕಾರ ಸದ್ಯ ಇಮ್ರಾನ್ ಖಾನ್ ಪರ 155 ಸಂಸದರಿದ್ದಾರೆ. ಕಲಾಪವನ್ನು ಸದ್ಯ ಮಿತ್ರಪಕ್ಷಗಳ ವಿಶ್ವಾಸ ಕಳೆದುಕೊಂಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಭಾಗವಾಗಿದ್ದ ಪಿಎಂಎಲ್ ಕ್ಯೂ ಪಕ್ಷದ ಸದಸ್ಯರು ಸಹ ಸಂಸತ್ ಕಲಾಪದಲ್ಲಿ ವಿಪಕ್ಷಗಳ ಜೊತೆ ಕಾಣಿಸಿಕೊಂಡು ಇಮ್ರಾನ್ ಖಾನ್‍ಗೆ ಶಾಕ್ ನೀಡಿದ್ದಾರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement