ಶ್ರೀನಗರದ ಸೋಪೋರ್‌ನಲ್ಲಿನ ಸಿಆರ್‌ಪಿಎಫ್ ಶಿಬಿರದ ಮೇಲೆ ಬಾಂಬ್ ಎಸೆದ ಬುರ್ಖಾ ಧರಿಸಿದ ಮಹಿಳೆ.. ಕೃತ್ಯ ಸಿಸಿಟಿಯಲ್ಲಿ ಸೆರೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತಾ ಶಿಬಿರದ ಮೇಲೆ ನಿನ್ನೆ ಬುರ್ಖಾಧಾರಿ ಮಹಿಳೆಯೊಬ್ಬರು ಬಾಂಬ್ ಎಸೆಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಮಹಿಳೆ ರಸ್ತೆಯ ಮಧ್ಯದಲ್ಲಿ ನಿಂತು ತನ್ನ ಬ್ಯಾಗ್‌ನಿಂದ ಬಾಂಬ್ ಅನ್ನು ಹೊರತೆಗೆದು ಸಿಆರ್‌ಪಿಎಫ್ ಬಂಕರ್‌ಗೆ ತರಾತುರಿಯಲ್ಲಿ ಎಸೆದಿದ್ದಾಳೆ.

ರಸ್ತೆಯಲ್ಲಿ ಒಂದೆರಡು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳು ಹಾದು ಹೋಗುತ್ತಿದ್ದವು. ಬಾಂಬ್ ಎಸೆದ ಕೂಡಲೇ ಆಕೆ ಸ್ಥಳದಿಂದ ಓಡಿಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಘಟನೆಯ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿದ್ದು, ಇದು ಬುರ್ಖಾ ಧರಿಸಿದ ಮಹಿಳೆಯೊಬ್ಬರು ಸಿಆರ್‌ಪಿಎಫ್ ಪೋಸ್ಟ್‌ಗೆ ಬಾಂಬ್ ಎಸೆಯುತ್ತಿರುವುದನ್ನು ತೋರಿಸುತ್ತದೆ.

ವರದಿಯ ಪ್ರಕಾರ, ಬುರ್ಖಾ ಧರಿಸಿದ ಮಹಿಳೆ ಸಿಆರ್‌ಪಿಎಫ್ ಶಿಬಿರದಲ್ಲಿ ಭದ್ರತಾ ಸಿಬ್ಬಂದಿಯತ್ತ ಗ್ರೆನೇಡ್ ಎಸೆದಿದ್ದಾಳೆ. ದಾಳಿಯಲ್ಲಿ ಓರ್ವ ಪೊಲೀಸ್ ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ತಕ್ಷಣ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರನನ್ನು ಹಿಡಿಯಲು ಹುಡುಕಾಟವನ್ನು ಪ್ರಾರಂಭಿಸಲಾಯಿತು. ದಾಳಿಕೋರರನ್ನು ಗುರುತಿಸಲು ಭದ್ರತಾ ಅಧಿಕಾರಿಗಳು ಸಿಸಿಟಿವಿ ಕ್ಲಿಪ್‌ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ದಾಳಿಕೋರ ಯಾರೆಂದು ಗುರುತು ಪತ್ತೆಯಾಗಿದೆ, ಇನ್ನೂ ವಶಕ್ಕೆ ಪಡೆದಿಲ್ಲ.
ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement