ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ತಿಂಗಳಿಂದಲೂ ಹೆಚ್ಚುದಿನಗಳಿಂದ ಯುದ್ಧ ನಡೆಯುತ್ತಿದೆ. ಯುದ್ಧದಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ ಬೇರೆ ದೇಶಗಳಿಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. ಈಗ ನಿರಾಶ್ರಿತರಿಗೆ ಸಹಾಯ ಮಾಡಲು, 15 ವರ್ಷದ ಭಾರತೀಯ ಹುಡುಗನೊಬ್ಬ ಆ್ಯಪ್ ಅನ್ನು ವಿನ್ಯಾಸಗೊಳಿಸಿದ್ದು, ಉಕ್ರೇನಿಯನ್ ನಿರಾಶ್ರಿತರು ಅಗತ್ಯವಿರುವ ಸಹಾಯವನ್ನು ಪಡೆಯಲು ಇದನ್ನು ಬಳಸಬಹುದಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಈ ಆ್ಯಪ್ ಅನ್ನು ಸಿಕ್ವೊಯಾ ಇಂಡಿಯಾ ಮ್ಯಾನೇಜರ್ ಜಿ.ವಿ. ರವಿಶಂಕರ ಅವರ ಪುತ್ರ ತೇಜಸ್ ಎಂಬ 15 ವರ್ಷದ ಭಾರತೀಯ ಹುಡುಗ ಅಭಿವೃದ್ಧಿಪಡಿಸಿದ್ದಾನೆ. ಉತ್ತಮ ಸಾಫ್ಟ್ವೇರ್ ಎಂಜಿನಿಯರ್ಗಳು ಅಪ್ಲಿಕೇಶನ್ ಅನ್ನು ನಿರ್ಮಿಸಲು ತಿಂಗಳುಗಳನ್ನು ತೆಗೆದುಕೊಳ್ಳುವಲ್ಲಿ, ತೇಜಸ್ ಕೇವಲ ಎರಡು ವಾರಗಳಲ್ಲಿ ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದ್ದಾನಂತೆ, ತೇಜಸ್ ತಯಾರಿಸಿದ ಈ ಆ್ಯಪ್ ಅನ್ನು ಇದೀಗ ಗೂಗಲ್ ಪ್ಲೇಸ್ಟೋರ್ ನಲ್ಲಿ ಸೇರಿಸಲಾಗಿದ್ದು, ಅದರ ಲಿಂಕ್ ಅನ್ನು ಸ್ವತಃ ತೇಜಸ್ ಟ್ವೀಟ್ ಮಾಡಿದ್ದಾರೆ.
ಸಾಫ್ಟ್ವೇರ್ ಡೆವಲಪರ್ ತೇಜಸ್ ರಚಿಸಿರುವ ಈ ಆ್ಯಪ್ ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ನಿರಾಶ್ರಿತರಿಗೆ ಹತ್ತಿರದ ನೆರವು ಸ್ಥಳಕ್ಕಾಗಿ ಇಡೀ ಪ್ರಪಂಚದ ನಕ್ಷೆಯನ್ನು ನೀಡಲಾಗುತ್ತದೆ. ರಾಷ್ಟ್ರೀಯ ಐಡಿ (ID) ಆಧಾರಿತ ಪರಿಶೀಲನಾ ಸೌಲಭ್ಯಗಳು, ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಗತ್ಯವಿರುವ ವ್ಯಕ್ತಿ ಕೇವಲ ಎರಡು ಕ್ಲಿಕ್ಗಳಲ್ಲಿ ಸಹಾಯ ಪಡೆಯಬಹುದು ಎಂದು ತೇಜಸ್ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ. ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ 12 ಇತರ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತೇಜಸ್ ತಂದೆ ಜಿ.ವಿ. ರವಿಶಂಕರ ಅವರು ತಮ್ಮ ಮಗನ ಸಾಧನೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ