ಸೊಂಡಿಲಿನಿಂದ ಮಾವುತನ ಮೇಲೆತ್ತಿಕೊಂಡು ಬೆನ್ನಮೇಲೆ ಕೂರಿಸಿಕೊಂಡ ಆನೆ : ಈ ರಿಯಲ್ ಲೈಫ್ ಬಾಹುಬಲಿ ದೃಶ್ಯ ವೀಡಿಯೊದಲ್ಲಿ ಸೆರೆ

ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಮಾವುತನೊಬ್ಬ ಆನೆಯ ಮೇಲೆ ಹತ್ತುತ್ತಿರುವ ಮತ್ತು ಸವಾರಿ ಮಾಡುವ ಅಪರೂಪದ ದೃಶ್ಯವನ್ನು ತೋರಿಸುತ್ತದೆ. ಅದು ಆತನಿಗೆ ದೈನಂದಿನ ವಿಷಯ ಎಂದು ಅಂದುಕೊಳ್ಳಬೇಡಿ. ಅದು ಮಾವುತನಿಗೆ ದೈನಂದಿನ ವಿಷಯವೇ ಆದರೂ ಇದು ಬಾಹಬಲಿ ಸಿನೆಮಾದಲ್ಲಿ ಪ್ರಭಾಸ್ ಆನೆಯನ್ನ ಪಳಗಿಸಿ ಅದರ ಸೊಂಡಿಲಿನ ಮೇಲೆ ಆನೆಯ ಮೇಲೆ ನಿಲ್ಲುವಂತಿದೆ.

ಅದು ಹೇಳೀಕೇಳಿ ಸಿನೆಮಾ, ಅದರಲ್ಲಿ ರೀಯಲ್‌ ಇರುವುದಿಲ್ಲ, ಅದು ಕೇವಲ ರೀಲ್‌. ಆದರೆಈ ವೀಡಿಯೊದಲ್ಲಿ ಮಾವುತ ರೀಯಲ್ಲಾಗಿ ಮಾವುತನು ಮೊದಲು ಆನೆಯ ಸೊಂಡಿಲಿನ ಮೇಲೆ ಏರಿ ಆನೆಯ ಬೆನ್ನಿನ ಮೇಲೆ ಏರುತ್ತಾನೆ. ಆನೆ ಮಾವುತನಿಗೆ ಏರಲು ತನ್ನ ಸೊಂಡಿಲನ್ನ ಕೆಳಗಿಳಿಸುತ್ತದೆ. ನಂತರ ಮಾವುತ ಸುಲಭವಾಗಿ ಆನೆಯ ಸೊಂಡಿಲನ ಮೇಲೆ ಏರಿ ಏಣಿಯಂತೆ ಅದನ್ನು ಬಳಸಿ ಆನೆಯ ಬೆನ್ನನ್ನು ಏರುತ್ತಾನೆ. ಅದು ಆನೆ ಅತ್ಯಂತ ಸಲೀಸಲಾಗಿ ಸೊಂಡಿಲಿನಲ್ಲಿ ಆತನ ಭಾರವನ್ನು ಎತ್ತುತ್ತದೆ. ಅಂತರ್ಜಾಲದಲ್ಲಿ ನೆಟ್ಟಿಗರು ಈ ಆನೆಗೆ ನಿಜವಾದ ಬಾಹುಬಲಿ ಎಂದು ಹೇಳಿದ್ದಾರೆ.

ಓದಿರಿ :-   ದೆಹಲಿಯ ಕುತುಬ್ ಮಿನಾರ್ ಸಂಕೀರ್ಣ ಉತ್ಖನನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ