ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಗೊಂಡ ನಂತರ ಅಧಿಕಾರ ವಹಿಸಿಕೊಳ್ಳಲು 294 ಕಿಮೀ ಸೈಕಲ್‌ ತುಳಿದ ಮಹಾರಾಷ್ಟ್ರ ಅರಣ್ಯಾಧಿಕಾರಿ

ಮುಂಬೈ: ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಪೋಸ್ಟಿಂಗ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ ಹೋಗಲು 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದಷ್ಟೆ 59 ನೇ ವರ್ಷಕ್ಕೆ ಕಾಲಿಟ್ಟ ನಾನಾಸಾಹೇಬ್ ಲಾಡ್ಕಟ್ ಎಂಬ ಅಧಿಕಾರಿ ಬುಧವಾರದಂದು ಸೈಕಲ್ ತುಳಿದು, ಬೇಸಿಗೆಯ ಬಿಸಿಲಿನ ನಡುವೆಯೂ 17 ಗಂಟೆಗಳ ನಂತರ ಕೊಲ್ಲಾಪುರವನ್ನು ತಲುಪಿದ್ದಾರೆ. ಅದರಲ್ಲಿ ಅವರು 12 ಗಂಟೆಗಳ ಕಾಲ ಸೈಕಲ್‌ ತುಳಿಯುವುದರಲ್ಲಿ ಕಳೆದಿದ್ದಾರೆ.
ನಾನು ಸೈಕಲ್ ತುಳಿಯುತ್ತಿದ್ದೆ. ಆದರೆ ನನ್ನ ಹಿಂದಿನ ಸೈಕ್ಲಿಂಗ್ ಒಂದು ದಿನದಲ್ಲಿ 60-ಕಿಲೋಮೀಟರ್ ವ್ಯಾಪ್ತಿಯನ್ನು ದಾಟಿರಲಿಲ್ಲ. ಆದರೆ, ನಾನು ಕೊಲ್ಲಾಪುರಕ್ಕೆ ವರ್ಗಾವಣೆಯಾದಾಗ, ನಾನು ಸಂಪೂರ್ಣ ದೂರವನ್ನು ಒಂದೇ ದಿನದಲ್ಲಿ ಸೈಕಲ್ ಮಾಡಲು ನಿರ್ಧರಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ವಿಪರೀತ ಉಷ್ಣತೆಯಿಂದಾಗಿ ನನಗೆ ಕೆಲವು ವಿರಾಮಗಳು ಬೇಕಾಗಿದ್ದವು. ಪುಣೆ ಮತ್ತು ಸತಾರಾ ಜಿಲ್ಲೆಗಳ ನಡುವಿನ ಖಂಬಟಕಿ ಘಾಟ್ ಸಾಕಷ್ಟು ಸವಾಲಿನದ್ದಾಗಿತ್ತು, ಆದರೆ ನಾನು ಅದನ್ನು ನಿರ್ವಹಿಸಿದೆ ಎಂದು ಅವರು ಹೇಳಿದರು.
ಬುಧವಾರ ಸಂಜೆ ಕೊಲ್ಲಾಪುರ ತಲುಪಿದ ಲಾಡ್ಕಟ್, ಸತಾರಾ ಮತ್ತು ಕೊಲ್ಹಾಪುರದಲ್ಲಿ ಹರಡಿರುವ ಮತ್ತು ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಭಾಗಗಳನ್ನು ಒಳಗೊಂಡಿರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಮತ್ತು ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಸೈಕ್ಲಿಂಗ್ ಪ್ರಯತ್ನದ ಹಿಂದಿನ ಉದ್ದೇಶ ಅರಣ್ಯ ಉಳಿಸುವ ಸಂದೇಶವನ್ನು ನೀಡುವುದಾಗಿತ್ತು. ಇದು ಬಹಳ ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ. ಹೀಗಾಗಿ, ನಾವು ಅರಣ್ಯಗಳನ್ನು ಸಂರಕ್ಷಿಸಬೇಕಾಗಿದೆ ಮತ್ತು ವನ್ಯಜೀವಿಗಳನ್ನು ರಕ್ಷಿಸಬೇಕಾಗಿದೆ ಎಂದು ಲಾಡ್ಕಟ್ ಹೇಳಿದರು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement