ಭೂತ ಓಡಿಸುತ್ತೇನೆಂದು ಬಾಲಕಿಗೆ ಥಳಿಸಿ ಧೂಪದ ಕಡ್ಡಿಯಿಂದ ದೇಹ ಸುಟ್ಟ ಮಂತ್ರವಾದಿ ಬಂಧನ: ಬಾಲಕಿ ಆಸ್ಪತ್ರೆಗೆ ದಾಖಲು

ರಾಂಚಿ: ದುಷ್ಟಶಕ್ತಿಗಳನ್ನು ಓಡಸಿಲು 14 ವರ್ಷದ ಬಾಲಕಿಯನ್ನು ಥಳಿಸಿ, ಆಕೆಯ ದೇಹದ ಭಾಗಗಳನ್ನು ಅಗರಬತ್ತಿಗಳಿಂದ ಸುಟ್ಟ ಆರೋಪದ ಮೇಲೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಮಂತ್ರವಾದಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಳೆದ ವಾರ ಹೋಳಿ ಆಡಿದ್ದ ಬಾಲಕಿ ನಂತರ ಬಾಲಕಿ ಅಸ್ವಸ್ಥಳಾಗಿದ್ದಳು. ಮಾಂತ್ರಿಕ ಮೌಲಾನಾ ಎಂ.ಡಿ ವಾಹಿದ್ ಎಂಬಾತ ಅವಳ ಮೈಯಲ್ಲಿ ಭೂತ ಹೊಕ್ಕಿದ್ದು. ಭೂತವನ್ನು ಓಡಿಸಿದರೆ ಮೂಲಕ ಅವಳು ಗುಣಮುಖಳಾಗುತ್ತಾಳೆ ಎಂದು ಆಕೆಯ ಕುಟುಂಬಕ್ಕೆ ಭರವಸೆ ನೀಡಿದ್ದ ಎನ್ನಲಾಗಿದೆ.
ಬಳಿಕ ನಾಲ್ಕು ದಿನಗಳಲ್ಲಿ, ವಾಹಿದ್ ಬಾಲಕಿ ಮೈಯಲ್ಲಿದ್ದ ಭೂತ ಓಡಿಸುವ ನೆಪದಲ್ಲಿ ಚಿತ್ರಹಿಂಸೆ ನೀಡಿದ್ದಾನೆ. ಅಲ್ಲದೆ, ಪ್ರೇತೋಚ್ಚಾಟನೆ ನೆಪದಲ್ಲಿ ಮಂತ್ರವಾದಿ ಬಾಲಕಿಯನ್ನು ಥಳಿಸಿದ್ದಾನೆ. ಬಳಿಕ ಸುಡುವ ಧೂಪದ್ರವ್ಯದ ತುಂಡುಗಳಿಂದ ಅವಳ ಮುಖ, ತುಟಿ ಮತ್ತು ಕೈಗಳನ್ನು ಸುಟ್ಟಿದ್ದಾನೆ. ನಂತರ ಅವಳು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಛತ್ರದಲ್ಲಿರುವ ಸದರ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ.
ಬಾಲಕಿಯ ಕುಟುಂಬವು ಲಾವಾಲಾಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮಂತ್ರವಾದಿ ವಾಹಿದ್ (35) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಂಜನ್ ತಿಳಿಸಿದ್ದಾರೆ.

ಓದಿರಿ :-   ಆಸ್ತಿ ಕಬಳಿಸಲು ʼಡಿ ಕಂಪೆನಿʼ ಜೊತೆ ಸಂಚು ರೂಪಿಸಿದ್ದ ನವಾಬ್ ಮಲಿಕ್: ಮುಂಬೈ ಕೋರ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ