ಕೋಲಂಬೊ: 53 ವರ್ಷದ ವ್ಯಕ್ತಿಯೊಬ್ಬರು ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಮಿರಿಹಾನಾದಲ್ಲಿರುವ ಮನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿ ಟ್ರಾನ್ಸ್ಫಾರ್ಮರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇಶದಲ್ಲಿ ಹೇರಲಾದ 36 ಗಂಟೆಗಳ ಕರ್ಫ್ಯೂ ಪ್ರತಿಭಟನಾಕಾರರನ್ನು ಹೊರಗೆ ಹೋಗದಂತೆ ಮತ್ತು ಆಂದೋಲನಗಳನ್ನು ನಡೆಸುವುದನ್ನು ತಡೆಯಲು ವಿಫಲವಾಗಿದೆ.
ದ್ವೀಪ ರಾಷ್ಟ್ರದಲ್ಲಿ ಹೇರಲಾಗಿರುವ 13 ಗಂಟೆಗಳ ಸುದೀರ್ಘ ವಿದ್ಯುತ್ ಕಡಿತವನ್ನು ಕೊನೆಗೊಳಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
ಶ್ರೀಲಂಕಾ ಈಗ ತನ್ನ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಸಾರ್ವಜನಿಕರು ಕಂಗೆಟ್ಟಿದ್ದಾರೆ.
ಸರ್ಕಾರ ಹೇರಿದ ಕರ್ಫ್ಯೂ ಹೊರತಾಗಿಯೂ, ಪ್ರತಿಭಟನೆಗಳು ದೇಶದಲ್ಲಿ ನಿಯಂತ್ರಣವನ್ನು ಮೀರುತ್ತಿವೆ. ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ 664 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಪಕ್ಸೆಗಳು ರಾಷ್ಟ್ರವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬಹುದು ಎಂಬುದರ ಕುರಿತು ಸುಳಿವಿಲ್ಲದಂತೆ ಕಂಡುಬರುತ್ತಿದೆ. ಪ್ರತಿಪಕ್ಷದ ಶಾಸಕರು ತಮ್ಮ ನಾಯಕ ಸಜಿತ್ ಪ್ರೇಮದಾಸ ನೇತೃತ್ವದಲ್ಲಿ ಕೊಲಂಬೊದ ಸ್ವಾತಂತ್ರ್ಯ ಚೌಕಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದರು.


ನಿಮ್ಮ ಕಾಮೆಂಟ್ ಬರೆಯಿರಿ