ಹೈದರಾಬಾದ್ ರೇವ್ ಪಾರ್ಟಿ: ವಿಐಪಿಗಳು-ನಟರು-ರಾಜಕಾರಣಿಗಳ ಮಕ್ಕಳು ಸೇರಿ 142 ಜನರು ವಶಕ್ಕೆ

ಹೈದರಾಬಾದ್: ಬಂಜಾರಾ ಹಿಲ್ಸ್‌ನ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿ ಭಾನುವಾರ ಮುಂಜಾನೆ ರೇವ್ ಪಾರ್ಟಿಯನ್ನು ಭೇದಿಸಿದ ಹೈದರಾಬಾದ್ ಪೊಲೀಸ್ ಟಾಸ್ಕ್ ಫೋರ್ಸ್ ತಂಡವು ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ವಶಕ್ಕೆ ತೆಗೆದುಕೊಂಡಿದೆ.
ಕೊಕೇನ್ ಮತ್ತು ವೀಡ್‌ನಂತಹ ನಿಷೇಧಿತ ಪದಾರ್ಥಗಳು ಅವರ ಬಳಿ ಕಂಡುಬಂದಿವೆ ಎಂದು ವರದಿಗಳು ಹೇಳುತ್ತವೆ.
ಬಂಧಿತರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ನಿಹಾರಿಕಾ ಕೊನಿಡೇಲಾ ಕೂಡ ಸೇರಿದ್ದಾರೆ. ನಂತರ ನಾಗಬಾಬು ಅವರು ತಮ್ಮ ಮಗಳಿಗೆ ಡ್ರಗ್ಸ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ವೀಡಿಯೊ ಬಿಡುಗಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

ವಶಕ್ಕೆ ಪಡೆದವರಲ್ಲಿ ಗಾಯಕ ಮತ್ತು ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನ ಮೂರನೇ ಅವತರಣಿಕೆಯ ವಿಜೇತ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಫೆಬ್ರವರಿ 12 ರಂದು ಹೈದರಾಬಾದ್ ಪೊಲೀಸರು ಡ್ರಗ್ಸ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದಾಗ ಈತ ಡ್ರಗ್ಸ್‌ ವಿರುದ್ಧ ಥೀಮ್ ಹಾಡನ್ನು ಹಾಡಿದ್ದರು.
ಪಾರ್ಟಿಯಲ್ಲಿದ್ದ ಇತರರಲ್ಲಿ ಆಂಧ್ರಪ್ರದೇಶದ ಉನ್ನತ ಪೋಲೀಸರೊಬ್ಬರ ಮಗಳು ಮತ್ತು ರಾಜ್ಯದ ತೆಲುಗು ದೇಶಂ ಸಂಸದರ ಮಗ ಕೂಡ ಇದ್ದಾರೆ ಎಂದು ಹೇಳಲಾಗಿದೆ. ತೆಲಂಗಾಣದ ಕಾಂಗ್ರೆಸ್ ನಾಯಕ ಅಂಜನ್ ಕುಮಾರ್ ಯಾದವ್, ತನ್ನ ಮಗ ಜನ್ಮದಿನದ ಪಾರ್ಟಿಗೆ ಹೋಗಿದ್ದಾನೆ ಮತ್ತು ಎಲ್ಲಾ ರೀತಿಯ ಸುಳ್ಳು ಮತ್ತು ಹಗರಣಗಳನ್ನು ತಪ್ಪಾಗಿ ತೇಲಿ ಬಿಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವರು ನಗರದ ಎಲ್ಲಾ ಪಬ್‌ಗಳನ್ನು ಮುಚ್ಚಬೇಕು ಎಂದರು.
ಬಂಜಾರಾ ಹಿಲ್ಸ್‌ನಲ್ಲಿರುವ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಿವಚಂದ್ರ ಅವರನ್ನು ಕರ್ತವ್ಯ ನಿರ್ಲಕ್ಷ್ಯಕ್ಕಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅಮಾನತುಗೊಳಿಸಿದ್ದಾರೆ. ಅವರ ಸ್ಥಾನಕ್ಕೆ ಟಾಸ್ಕ್ ಫೋರ್ಸ್‌ನಲ್ಲಿದ್ದ ಕೆ ನಾಗೇಶ್ವರ ರಾವ್ ಅವರನ್ನು ನೇಮಿಸಲಾಗಿದೆ.
Radisson Blu ಹೋಟೆಲ್‌ನಲ್ಲಿ ಈ ದಾಳಿಯು ಪೊಲೀಸರು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಮಯದಲ್ಲಿ ಬಂದಿದೆ. ಈ ಉದ್ದೇಶಕ್ಕಾಗಿ ಹೊಸ ಹೈದರಾಬಾದ್-ನಾರ್ಕೋಟಿಕ್ಸ್ ಎನ್‌ಫೋರ್ಸ್‌ಮೆಂಟ್ ವಿಂಗ್ ಅನ್ನು ರಚಿಸಲಾಗಿದೆ ಮತ್ತು ಮಾದಕ ದ್ರವ್ಯಗಳನ್ನು ಮಾರಾಟ ಮಾಡುವ ಅಥವಾ ಸೇವಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಇತ್ತೀಚೆಗಷ್ಟೇ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ರಗ್ ಓವರ್ ಡೋಸ್ ನಿಂದ ಮೃತಪಟ್ಟಿದ್ದ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement