ದೇಶಕ್ಕೆ ಅವರ ಅಗತ್ಯವಿದೆ…: ತನ್ನ ಎಲ್ಲ ಆಸ್ತಿಯನ್ನೂ ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಡೆಹ್ರಾಡೂನಿನ 78 ವರ್ಷದ ಮಹಿಳೆ…!

ಡೆಹ್ರಾಡೂನ್‌: ಉತ್ತರಾಖಂಡ್‌ನ ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು 50 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಮತ್ತು 10 ತೊಲೆ ಚಿನ್ನ ಸೇರಿದಂತೆ ತಮ್ಮ ಎಲ್ಲ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ.
ಪುಷ್ಪಾ ಮುಂಜಿಯಾಲ್ ಎಂಬ ಮಹಿಳೆ ಡೆಹ್ರಾಡೂನ್ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಕಾಗದಪತ್ರಗಳನ್ನು ನೀಡಿದ್ದಾರೆ. ತನ್ನ ಮರಣದ ನಂತರ ತನ್ನ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯ ಎಂದು ಪುಷ್ಪಾ ಮುಂಜಿಯಾಲ್‌ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ ಮತ್ತು ಅದಕ್ಕಾಗಿಯೇ ತನ್ನ ಆಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
ಮಾಜಿ ರಾಜ್ಯಾಧ್ಯಕ್ಷ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಾಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲಚಂದ್ ಶರ್ಮಾ ಹೇಳಿದ್ದಾರೆ.

ಓದಿರಿ :-   ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಾಗಿ ಬಂಧನ: ದೆಹಲಿ ವಿವಿ ಪ್ರಾಧ್ಯಾಪಕರಿಗೆ ಜಾಮೀನು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ