ಮೈಸೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಬೇಲಾಳು ಗ್ರಾಮದ ಸಮೀಪದ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಸಿಕ್ಕಿಬಿದ್ದಿದ್ದ ಎರಡು ಚಿರತೆ ರಕ್ಷಣೆ ಮಾಡಲಾಗಿದೆ.
ದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಒಳಗೆ ಹೋದ ಚಿರತೆ ಮರಿ ತಂತಿ ಬೇಲಿಯಲ್ಲಿ ಸಿಲುಕಿ ಹೊರಗೆ ಹೋಗಲಾಗದೆ ಒದ್ದಾಡುತ್ತಿತ್ತು. ನಂತರ ಕೂಗಾಟ ಆರಂಭಿಸಿದೆ. ಇದನ್ನು ನೋಡಿದ ಭದ್ರತಾ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ನೆಡೆಸಿ ಸೋಲಾರ್ ಪವರ್ ಪ್ಲಾಂಟ್ ಗೆ ಅಳವಡಿಸಿರುವ ಮುಳ್ಳು ತಂತಿಯನ್ನು ಭೇದಿಸಿ ಹೊರ ಹೋಗುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಹಸಿರು ಹುಲ್ಲು ಇರುವ ಕಾರಣ ಚಿರತೆಗಳು ಅಡಗಿರುವ ಸ್ಥಳಗಳನ್ನು ಪತ್ತೆ ಹಚ್ಚಿದರು.
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ, ರಕ್ಷಣೆ ಮಾಡಿದ್ದಾರೆ. ಒಟ್ಟು ಎರಡು ಚಿರತೆ ಮರಿಗಳು ಇದ್ದವು ಎಂದು ಹೇಳಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ