ತರಗತಿಯಲ್ಲಿ ಅತ್ಯಾಚಾರದ ಬಗ್ಗೆ ಪೌರಾಣಿಕ ಉಲ್ಲೇಖ: ವಿವಿ ಆಡಳಿತ ಶೋಕಾಸ್‌ ನೋಟಿಸ್‌ ನೀಡಿದ ನಂತರ ಬೇಷರತ್‌ ಕ್ಷಮೆಯಾಚಿಸಿದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್

ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ (AMU) ಆಡಳಿತವು ಅದರ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ.ಜಿತೇಂದ್ರಕುಮಾರ ಮಾಡಿದ ಅತ್ಯಾಚಾರದ ಬಗೆಗಿನ ‘ಪೌರಾಣಿಕ ಉಲ್ಲೇಖಗಳ’ ಬಗ್ಗೆ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ಗಂಟೆಗಳ ನಂತರ, ಪ್ರಾಧ್ಯಾಪಕರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಈ ಘಟನೆಯು ಲೈಂಗಿಕ ಅಪರಾಧಗಳ ವಿಷಯದ ತರಗತಿಗೆ ಸಂಬಂಧಿಸಿದೆ, ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪಾಠ ತೆಗೆದುಕೊಳ್ಳುವಾಗ ಪ್ರೊಫೆಸರ್ ಕುಮಾರ್ ಅವರು ಪುರಾಣಗಳಲ್ಲಿನ ಅತ್ಯಾಚಾರದ ನಿದರ್ಶನಗಳ ಬಗ್ಗೆ ಸ್ಲೈಡ್‌ನಲ್ಲಿ ಹಿಂದೂ ದೇವರುಗಳ ಉಲ್ಲೇಖಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಡಾ.ಜಿತೇಂದ್ರಕುಮಾರ ಅವರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ‘ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ’ ವಿಶ್ವವಿದ್ಯಾಲಯವು ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತು ಮತ್ತು 24 ಗಂಟೆಗಳ ಕಾಲಾವಧಿಯಲ್ಲಿ ಉತ್ತರವನ್ನು ನೀಡುವಂತೆ ಸೂಚಿಸಿತು.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯ ಆಡಳಿತ ಮತ್ತು ವೈದ್ಯಕೀಯ ವಿಭಾಗವು ಅತ್ಯಾಚಾರದ ಪೌರಾಣಿಕ ಉಲ್ಲೇಖದ ಮೇಲಿನ ಸ್ಲೈಡ್‌ನ ವಿಷಯವನ್ನು ಬಲವಾಗಿ ಖಂಡಿಸುತ್ತದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ 24 ಗಂಟೆಗಳಲ್ಲಿ ಉತ್ತರವನ್ನು ಸಲ್ಲಿಸಲು ಅವರನ್ನು ಕೇಳಲಾಗಿದೆ ಎಂದು ಶೋಕಾಸ್‌ ನೋಟಿಸ್‌ನಲ್ಲಿ ಹೇಳಲಾಗಿದೆ.

ಓದಿರಿ :-   ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬಲವಂತದ ಮತಾಂತರ: ಸಿಬಿಐ-ಎನ್‌ಐಎ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ

ವಿಶ್ವವಿದ್ಯಾನಿಲಯವು ಈ ವಿಷಯವನ್ನು ತನಿಖೆ ಮಾಡಲು ಮತ್ತು ಭವಿಷ್ಯದಲ್ಲಿ ಅದನ್ನು ತಡೆಯಲು ವಿಧಾನಗಳನ್ನು ಶಿಫಾರಸು ಮಾಡಲು ಇಬ್ಬರು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ.
ಈ ಮಧ್ಯೆ, ಡಾ ಜಿತೇಂದ್ರ ಕುಮಾರ್ ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ ಎಂದು ವಿಶ್ವ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ ಹೇಳಿದೆ.
ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರು ತರಗತಿಯ ಪ್ರಸ್ತುತಿಯ ಸಮಯದಲ್ಲಿ ಲೈಂಗಿಕ ಅಪರಾಧಗಳ ವಿಷಯದ ಕುರಿತು ಮಾತನಾಡುವಾಗ ‘ಅತ್ಯಾಚಾರದ ಕುರಿತು ಕೆಲವು ಅವಹೇಳನಕಾರಿ ಪೌರಾಣಿಕ ಉಲ್ಲೇಖಗಳನ್ನು ಮಾಡಿದ್ದಕ್ಕಾಗಿ’ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದೆ.

“ನನ್ನ ತರಗತಿಯಲ್ಲಿ (3ನೇ ವರ್ಷದ ಎಂಬಿಬಿಎಸ್‌ 2019 ಬ್ಯಾಚ್) 05.04.2022 ರಂದು ಬೆಳಿಗ್ಗೆ 8 ಗಂಟೆಗೆ ಲೈಂಗಿಕ ಅಪರಾಧಗಳ ವಿಷಯದ ಕುರಿತು ಕೆಲವು ಪೌರಾಣಿಕ ಉಲ್ಲೇಖಗಳನ್ನು ಮಾಡಿದ್ದಕ್ಕಾಗಿ ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ನನ್ನ ಉದ್ದೇಶವು ಯಾವುದೇ ನಿರ್ದಿಷ್ಟ ಧರ್ಮದ ಭಾವನೆಗಳಿಗೆ ನೋವುಂಟು ಮಾಡುವುದಲ್ಲವಾಗಿತ್ತು. ಉಲ್ಲೇಖವು ಅತ್ಯಾಚಾರವು ಬಹಳ ಹಿಂದಿನಿಂದಲೂ ಸಮಾಜದಲ್ಲಿ ನಡೆಯುತ್ತಿದೆ ಎಂದು ಮಾತ್ರ ಹೇಳುವ ಉದ್ದೇಶ ಹೊಂದಿತ್ತು. ನನ್ನ ಕಡೆಯಿಂದ ನಾನು ಅಚಾತುರ್ಯದಿಂದ ಮಾಡಿದ ತಪ್ಪಾಗಿದೆ ಎಂದು ಭಾವಿಸುತ್ತೇನೆ, ಭವಿಷ್ಯದಲ್ಲಿ ಅಂತಹ ತಪ್ಪು ಸಂಭವಿಸುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಮತ್ತು ನಾನು ಮತ್ತೊಮ್ಮೆ ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ” ಎಂದು ಪ್ರಾಧ್ಯಾಪಕರ ಕ್ಷಮಾಪಣೆ ಪತ್ರ ಹೇಳಿದೆ.
ಅತ್ಯಾಚಾರ’ವನ್ನು ಚಿತ್ರಿಸಲು ಜಿತೇಂದ್ರಕುಮಾರ್ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಬಳಸಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಯಿತು.

ಓದಿರಿ :-   ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಹರಿಯಾಣದ ಮಾಜಿ ಸಿಎಂ ಚೌತಾಲಾ ದೋಷಿ ಎಂದು ದೆಹಲಿ ಕೋರ್ಟ್ ತೀರ್ಪು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ