ರಾಜ್ ಠಾಕ್ರೆಯವರೇ ಬಾಳ್‌ ಠಾಕ್ರೆಯವರ ನಿಜವಾದ ವಾರಸುದಾರ ಎಂದು ಶಿವಸೇನಾ ಭವನದ ಮುಂದೆ ಬೃಹತ್‌ ಪೋಸ್ಟರ್ ಹಾಕಿದ ಎಂಎನ್‌ಎಸ್

ಮುಂಬೈ: ಕುರ್ಲಾದ ಮೈದಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಆರು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರನ್ನು ಬಂಧಿಸಿದ ಒಂದು ದಿನದ ನಂತರ, ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷವು ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ಶಿವಸೇನಾ ಭವನದ ಹೊರಗೆ ಬೃಹತ್‌ ಪೋಸ್ಟರ್ ಹಾಕಿದೆ. ಈ ಪೋಸ್ಟರ್ ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರನ್ನು ಉದ್ದೇಶಿಸಿ ಬರೆದ ಪತ್ರವಾಗಿದೆ. ಪತ್ರದಲ್ಲಿ ರಾಜ್ ಠಾಕ್ರೆ ಅವರು ಬಾಳ್ ಠಾಕ್ರೆ ಅವರ ಪರಂಪರೆಯ ‘ನಿಜವಾದ ವಾರಸುದಾರ’ ಎಂದು ಹೇಳಿಕೊಳ್ಳುತ್ತಾರೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ‘ವಿವೇಚನೆಯನ್ನು ನೀಡಿ’ ಎಂದು ದಿವಂಗತ ಶಿವಸೇನಾ ಬಾಳಾ ಸಾಹೇಬ ಠಾಕ್ರೆ ಅವರನ್ನು ಕೇಳಿಕೊಂಡಿದ್ದಾರೆ ಎಂದು ಎಬಿಪಿ ಲೈವ್.ಕಾಮ್‌ ವರದಿ ಮಾಡಿದೆ.

ವರದಿ ಪ್ರಕಾರ, ಪೋಸ್ಟರ್‌ನಲ್ಲಿ ಮರಾಠಿಯಲ್ಲಿ ಬರೆದ ಪಠ್ಯದ ಅನುವಾದ ಹೀಗಿದೆ
“ಗೌರವಾನ್ವಿತ ಬಾಳಾಸಾಹೇಬರೇ,
ನೋಡಿ, ನಿಮ್ಮ ಮಗ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಹಿಂದೂ ಆಗಿದ್ದರೂ ಹನುಮಾನ್ ಚಾಲೀಸಾ ಹಾಡುವುದನ್ನು ನಿಷೇಧಿಸುತ್ತಿದ್ದಾರೆ. ಹಿಂದೂಗಳು ಹಾಕಿರುವ ಧ್ವನಿವರ್ಧಕಗಳನ್ನು ತೆಗೆಯುತ್ತಿದ್ದಾರೆ.
ನಿಮ್ಮ ‘ಠಾಕ್ರೆ ತತ್ವ’ ಮತ್ತು ಅದರ ಪರಂಪರೆಯನ್ನು ನಿಜವಾಗಿಯೂ ರಾಜ್ ಸಾಹೇಬ್ ಠಾಕ್ರೆ ನಡೆಸುತ್ತಿದ್ದಾರೆ. ಸಾಧ್ಯವಾದರೆ, ಉದ್ಧವ್ ಠಾಕ್ರೆ ಅವರಿಗೆ ಹಿಂದೂಗಳ ವಿಚಾರದಲ್ಲಿ ಬುದ್ಧಿ ಹೇಳಿ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಈ ಪೋಸ್ಟರ್ ಅನ್ನು ಶಿವಸೇನಾ ಭವನದ ಭದ್ರತಾ ಸಿಬ್ಬಂದಿ ಇದೀಗ ತೆಗೆದುಹಾಕಿದ್ದಾರೆ.
ರಾಜ್ ಠಾಕ್ರೆ ಅವರು ತಮ್ಮ ವಾರ್ಷಿಕ ಗುಧಿ ಪಾಡ್ವಾ ಭಾಷಣದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಸೀದಿಗಳ ಹೊರಗೆ ಹನುಮಾನ್‌ ಚಾಲೀಸಾ ನುಡಿಸುವಂತೆ ಹೇಳಿದ ನಂತರ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಬಿತ್ತರಿಸುವ ವಿಷಯವು ಮುನ್ನೆಲೆಗೆ ಬಂದಿತು.
ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ನಾನೀಗ ಎಚ್ಚರಿಕೆ ನೀಡುತ್ತಿದ್ದೇನೆ… ಧ್ವನಿವರ್ಧಕಗಳನ್ನು ತೆಗೆದುಹಾಕಿ ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸಾ ನುಡಿಸುತ್ತೇನೆ ಎಂದು ಮುಂಬೈನಲ್ಲಿ ಅವರು ಸರ್ಕಾರಕ್ಕೆ ಹೇಳಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement