ಕುಕರ್ಮ ಹಿಟ್‌ ಬ್ಯಾಕ್‌…ದೇವಾಲಯದ ಆಭರಣ ಕದಿಯಲು ಹೋಗಿ ತಾನು ಕೊರೆದ ರಂಧ್ರದಲ್ಲಿಯೇ ಸಿಕ್ಕಿಕೊಂಡ ಕಳ್ಳ | ವೀಡಿಯೊ ವೀಕ್ಷಿಸಿ

ಶ್ರೀಕಾಕುಳಂ: ಸ್ವತಃ ದೈವಿಕ ಹಸ್ತಕ್ಷೇಪ ಎಂದು ಕರೆಯಬಹುದಾದ ಪ್ರಕರಣವೊಂದರಲ್ಲಿ ಕುಕರ್ಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿದೆ.
ಆಂಧ್ರಪ್ರದೇಶದ ದೇವಾಲಯದಿಂದ ಆಭರಣಗಳನ್ನು ಕದಿಯಲು ಕೊರೆದ ರಂಧ್ರದಲ್ಲಿ ಕಳ್ಳನೊಬ್ಬ ತಾನೇ ಸಿಲುಕಿಕೊಂಡಿದ್ದಾನೆ..!
ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯೆಲ್ಲಮ್ಮ ದೇವಸ್ಥಾನದಲ್ಲಿ ನಡೆದಿದೆ. ಆಭರಣದೊಂದಿಗೆ ಪರಾರಿಯಾಗಲು ಯತ್ನಿಸಿದ ಆರೋಪಿ ತಾನೇ ಪ್ರವೇಶಿಸಿ ಆಭರಣ ಕದ್ದು ವಾಪಸ್‌ ಬರುವಾಗ ಅದೇ ಕಿಂಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.
ಪಾಪ ರಾವ್ (30) ಎಂದು ಗುರುತಿಸಲಾದ ಕಳ್ಳನು ದೇವಸ್ಥಾನದ ಕಿಟಕಿಯನ್ನು ಒಡೆದು ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ. ಆದರೆ ಪಾರಾಗುವಾಗ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಆತ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ನಂತರ ಗ್ರಾಮಸ್ಥರು ಆತನನ್ನು ಅಲ್ಲಿಂದ ಪಾರು ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರ ಪ್ರಕಾರ, ಪಾಪರಾವ್ ದೇವಾಲಯದ ಗೋಡೆಯನ್ನು ಅಗೆದು ಕಿಂಡಿ ಮಾಡಿ ಅದರೊಳಗೆ ಪ್ರವೇಶಿಸಿದ್ದಾನೆ. ಆಭರಣಗಳನ್ನು ತಪ್ಪಿಸಿಕೊಳ್ಳುವ ವೇಳೆ ಕಿಂಡಿಯಲ್ಲಿ ಸಿಲುಕಿಕೊಂಡಿದ್ದಾನೆ.

ಏಪ್ರಿಲ್ 5 ಮಂಗಳವಾರದಂದು ಕಂಚಿಲಿ ಮಂಡಲದ ಜಾದುಪುಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಪಾಪ ರಾವ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತ ಗೋಡೆಯ ಕಿರಿದಾದ ದ್ವಾರದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು. ವೀಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾ, ದೇವಾಲಯದಿಂದ ತಾನು ಕದ್ದ ಆಭರಣಗಳನ್ನು ತೋರಿಸುತ್ತಾ, ತನ್ನನ್ನು ಹೊರತೆಗೆಯುವಂತೆ ಪಾಪ ರಾವ್ ಮನವಿ ಮಾಡುತ್ತಾನೆ.
ಕದಿಯಲು ಯತ್ನಿಸುತ್ತಿದ್ದ ಆಭರಣಗಳಲ್ಲಿ 9 ಗ್ರಾಂ ಬೆಳ್ಳಿಯಿದ್ದು, ಸುಮಾರು 650 ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು ಎಂದು ಕಂಚಿಲಿ ಸಬ್‌ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. “ಮಂಗಳವಾರ ಮಧ್ಯಾಹ್ನ ಅವರು ಸುಮಾರು 15 ನಿಮಿಷಗಳ ಕಾಲ ಸಿಲುಕಿಕೊಂಡಿದ್ದ, ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದು, ಪಾಪ ರಾವ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 454 (ಕಾರಾಗೃಹದ ಶಿಕ್ಷೆಗೆ ಗುರಿಯಾಗುವ ಅಪರಾಧವನ್ನು ಮಾಡುವ ಸಲುವಾಗಿ ಸುಪ್ತ ಮನೆ-ಅತಿಕ್ರಮಣ ಅಥವಾ ಮನೆ ಒಡೆಯುವುದು) ಮತ್ತು 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement