ಮದುವೆ ನೆಪದಲ್ಲಿ ಆನ್ಲೈನ್‌ ಸೈಟ್‌ ಮೂಲಕ 200ಕ್ಕೂ ಹೆಚ್ಚು ಹುಡುಗಿಯರನ್ನು ವಂಚಿಸಿದ ಭೂಪ..!

ಬಸ್ತಿ (ಉತ್ತರ ಪ್ರದೇಶ): ಆನ್‌ಲೈನ್ ಸೈಟ್‌ ಮೂಲಕ ಹಲವು ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಬಸ್ತಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಆರೋಪಿಯನ್ನು ಗಾಜಿಯಾಬಾದ್‌ನ ನಿವಾಸಿ ತರುಣಕುಮಾರ್ ಎಂದು ಗುರುತಿಸಲಾಗಿದೆ. ಕೊರೊನಾದಿಂದ ಉಂಟಾದ ಲಾಕ್‌ಡೌನ್ ಎಲ್ಲರನ್ನೂ ಹೆದರಿಸಿತು ಆದರೆ ಅದು ಈತನಿಗೆ ಹಣ ಸಂಪಾದಿಸಲು ಕಾರಣವಾಯಿತು. ಇದಕ್ಕಾಗಿ ಆರೋಪಿ ಎರಡು ವರ್ಷಗಳ ಹಿಂದೆ ಲಾಕ್ ಡೌನ್ ಸಮಯದಲ್ಲಿ ವೆಬ್ ಸೈಟ್ ಆರಂಭಿಸಿದ್ದ. ಮದುವೆಯಾಗಲು ಬಯಸುವ ಯುವತಿಯರಿಗೆ ಉತ್ತಮ ಮದುವೆ ಸಂಬಂಧ ಕಲ್ಪಿಸಿಕೊಡುತ್ತೇನೆಂದು ಬಲೆ ಬೀಸುತ್ತಿದ್ದ, ಅವರ ಬಳಿ ಜಾತಕ ದೋಷಗಳಿದ್ದು, ಅವುಗಳನ್ನು ಸರಿಪಡಿಸಲು ಪೂಜೆ ಮಾಡುವುದಾಗಿ ನಂಬಿಸಿ ಮದುವೆಯಾಗಲು ಬಯಸುವವರಿಂದ ಅಪಾರ ಹಣ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಆತನ ಖಾತೆಗೆ ಹಣ ಜಮೆಯಾದ ನಂತರ ಅವರು ಕರೆಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ, ಹಣ ನೀಡುವಂತೆ ಒತ್ತಡ ಹೇರಿದ ಸಂತ್ರಸ್ತರಿಂದ ತಪ್ಪಿಸಿಕೊಳ್ಳಲು ತನ್ನ ಫೋಟೋಕ್ಕೆ ಹೂವಿನ ಹಾರ ಹಾಕಿದ್ದನ್ನು ಅಪ್‌ಲೋಡ ಮಾಡಿದ ತಾನು ಸತ್ತಿದ್ದೇನೆ ಎಂದು ಬಂಬಿಸಿಕೊಳ್ಳುತ್ತಿದ್ದ. ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ಗಳಲ್ಲಿ ತಮ್ಮ ಪ್ರೊಫೈಲ್ ಫೋಟೋವನ್ನು ಬದಲಾಯಿಸುತ್ತಿದ್ದ. ಹಲವು ಯುವತಿಯರು ಇದು ನಿಜವೆಂದು ಭಾವಿಸಿ ಅಷ್ಟಕ್ಕೇ ಬಿಟ್ಟುನಿಡುತ್ತಿದ್ದರು.
ಆದರೆ, ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಯುವತಿಯೊಬ್ಬರು ನೀಡಿದ ದೂರಿನಿಂದ ಈತನ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಗಾಜಿಯಾಬಾದ್‌ನ ತರುಣ್‌ಕುಮಾರ್ ಎಂದು ಗುರುತಿಸಿದ್ದಾರೆ. ಈ ವೇಳೆ, ಕೇವಲ ಒಬ್ಬರಲ್ಲ, ನೂರಾರು ಮಂದಿಗೆ ಮೋಸ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದಾನೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement