ಜನವಸತಿ ಪ್ರದೇಶದಲ್ಲಿ ರಸ್ತೆ ದಾಟಿದ 25-30 ಅಡಿ ಉದ್ದದ ದೈತ್ಯ ಹೆಬ್ಬಾವು.. ದೃಶ್ಯ ವೀಡಿಯೊದಲ್ಲಿ ಸೆರೆ

ಇದು ಅಂತಿಂತ ಹಾವಲ್ಲ, ಬರೋಬ್ಬರಿ 25-30 ಅಡಿಗಳಷ್ಟು ಉದ್ದವಿದೆ. ಈ ದೈತ್ಯ ಹೆಬ್ಬಾವು ಒಡಿಶಾದ ನಬರಂಗಪುರ ಜಿಲ್ಲೆಯ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದೆ. ಹಾವು ಸುಮಾರು 25-30 ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ.

ಶುಕ್ರವಾರ ರಾತ್ರಿ ಖಾತಿಗುಡ ಜವಾಹರ ನವೋದಯ ವಿದ್ಯಾಲಯದ ಮುಂದಿನ ಮುಖ್ಯರಸ್ತೆ ದಾಟುತ್ತಿದ್ದಾಗ ಸ್ಥಳೀಯರು ಹಾವನ್ನು ಕಂಡಿದ್ದಾರೆ. ಈ ದೈತ್ಯ ಹೆಬ್ಬಾವು ರಸ್ತೆ ದಾಟುವಾಗ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹಾವು ಇಡೀ ರಸ್ತೆಯ ಅಗಲಕ್ಕಿಂತಲೂ ಉದ್ದವಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.

ಈ ದೈತ್ಯ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ಸೆರೆ ಹಿಡಿದ ವೀಡಿಯೊವನ್ನು ಮೊಹ್ಮ್ಮದ್‌ ಸುಫಿಯಾನ್‌ ಎಂಬವರು ಟ್ವೀಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ಓದಿರಿ :-   ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಹಿಂದಿ ಕಾದಂಬರಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ