ರಾವಲ್ಪಿಂಡಿ: ಇಮ್ರಾನ್ ಖಾನ್ ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಮತ್ತು ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಂಡ ನಂತರ, ಇಮ್ರಾನ್ ಬೆಂಬಲಿಗರು ಭಾನುವಾರ ದೇಶಾದ್ಯಂತ ರ್ಯಾಲಿಗಳನ್ನು ನಡೆಸಿದರು.
ಅಂತಹ ಒಂದು ರ್ಯಾಲಿಯಲ್ಲಿ, ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಮಾತನಾಡುವಾಗ ಸೇರಿದ್ದ ಜನಸಮೂಹ ‘ಚೌಕಿದಾರ್ ಚೋರ್ ಹೈ’ (ಕಾವಲುಗಾರ ಕಳ್ಳ) ಎಂದು ಘೋಷಣೆ ಕೂಗಿತು. ಇಮ್ರಾನ್ ಖಾನ್ ಅವರ ಜನಾದೇಶವನ್ನು ಕಸಿದುಕೊಂಡಿದ್ದಕ್ಕಾಗಿ ಪಾಕಿಸ್ತಾನ ಸೇನೆಯ ವಿರುದ್ಧ ಘೋಷಣೆಯನ್ನು ಕೂಗಿತು. ಹಾಗೂ ಶೇಕ್ ರಶೀದ್ ಅತ್ತ ಮಾತನಾಡುತ್ತಿದ್ದರೆ ಜನಸಮೂಹ ಇತ್ತ ಚೌಕಿದಾರ್ ಚೋರ್ ಹೈ ಎಂದು ಪಾಕಿಸ್ತಾನದ ಸೇನೆ ವಿರುದ್ಧ ಘೋಷಣೆ ಕೂಗುತ್ತಿತ್ತು.
advertisement
9535127775 / 9901837775 / 6364528715 / 08362775155 / https://icsmpucollege.com/
ಶೇಖ್ ರಶೀದ್ ಅಹ್ಮದ್ ಅವರು ತಕ್ಷಣವೇ ಇಂತಹ ಘೋಷಣೆಗಳನ್ನು ಕೂಈಗದಂತೆ ಕೇಳಿಕೊಂಡರು ಮತ್ತು ತಮ್ಮ ಪಕ್ಷ “ಶಾಂತಿಯುತವಾಗಿ ಹೋರಾಡುತ್ತದೆ ಎಂದು ಒತ್ತಿ ಹೇಳಿದರು.
ಭಾನುವಾರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್, ಈ ತಿಂಗಳು ಪರಿಸ್ಥಿತಿಗಳು ಬದಲಾಗುತ್ತವೆ ಮತ್ತು ಇಮ್ರಾನ್ ಖಾನ್ ಅವರ ಆಡಳಿತವನ್ನು ಬದಲಿಸಿದ “ಆಮದು ಮಾಡಿಕೊಂಡ ಸರ್ಕಾರವನ್ನು ಕೊನೆಗೊಳಿಸುವುದಾಗಿ” ಪ್ರತಿಜ್ಞೆ ಮಾಡಿದರು.
ಇದಲ್ಲದೆ, ಇಮ್ರಾನ್ ಖಾನ್‌ಗೆ ಒಗ್ಗಟ್ಟಿನಿಂದ ‘ಜೈಲ್ ಭರೋ’ (ಸ್ವಯಂಪ್ರೇರಿತ ಬಂಧನ) ಚಳವಳಿಯನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು.
ಶೇಖ್ ರಶೀದ್ ಅಹ್ಮದ್ ಅವರು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಮಾಜಿ ಪ್ರತಿಪಕ್ಷದವರನ್ನು ಕಳ್ಳರು ಮತ್ತು ದರೋಡೆಕೋರರು ಎಂದು ಕರೆದರು.
ಅಂತಿಮವಾಗಿ, ಮಧ್ಯರಾತ್ರಿಯ ಅವಿಶ್ವಾಸ ನಿರ್ಣಯವನ್ನು ಉಲ್ಲೇಖಿಸಿದ ಅವರು, “ನೀವು ನಿಮ್ಮ ದೇಶವನ್ನು ಉಳಿಸಲು ಬಯಸಿದರೆ, ರಾತ್ರಿಯ ಕತ್ತಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ ಹಗಲು ಬೆಳಕಿನಲ್ಲಿ ತೆಗೆದುಕೊಳ್ಳಿ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ