ಸತ್ತು ಹೋಗಿದ್ದಾನೆಂದು ಭಾವಿಸಿ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದ ವ್ಯಕ್ತಿ 12 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಪತ್ತೆ…!

ಬಿಹಾರದ ಬಕ್ಸರ್‌ನ ಛಾವಿ ಮುಸಾಹರ್ ಎಂಬವರು 12 ವರ್ಷಗಳಿಂದ ನಾಪತ್ತೆಯಾಗಿದ್ದರು. ಮೃತನೆಂದು ಭಾವಿಸಿ ಕುಟುಂಬಸ್ಥರು ಆ ವ್ಯಕ್ತಿ ಅಂತ್ಯಕ್ರಿಯೆ ಸಹ ನೆರವೇರಿಸಿದ್ದರು. ಆದರೆ ಈ ವ್ಯಕ್ತಿ ಬದುಕಿದ್ದಾನೆ ಎಂಬುದು ಈಗ ಗೊತ್ತಾಗಿದೆ..!
ಈ ವ್ಯಕ್ತಿ ಬದುಕಿದ್ದು ಪಾಕಿಸ್ತಾನದ ಜೈಲಿನಲ್ಲಿದ್ದ…! ಪ್ರಯತ್ನದ ನಂತರ ಶೀಘ್ರದಲ್ಲೇ ಅವರು ತಮ್ಮ ಮನೆಗೆ ಮರಳಲಿದ್ದಾರೆ. ಬಕ್ಸರ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಖಿಲಾಫತ್‌ಪುರ ನಿವಾಸಿ ಛಾವಿ ಮುಸಾಹರ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಮತ್ತು ಅವರು ಪಂಜಾಬ್ ಗಡಿಯಿಂದ ಭಾರತಕ್ಕೆ ಪ್ರವೇಶಿಸಿದ್ದಾರೆ. ಅಲ್ಲಿಂದ ಅವರನ್ನು ಕರೆತರಲು ಪೊಲೀಸರ ತರಲು ತಂಡ ಹೊರಟಿದೆ. ಶೀಘ್ರದಲ್ಲೇ ಛಾವಿ ಮುಸಾಹರ್‌ನನ್ನು ಾವರ ಮನೆಗೆ ಕರೆತರಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಇದಕ್ಕೆ ಅಗತ್ಯವಾದ ದಾಖಲೆಗಳು ಬಹುತೇಕ ಪೂರ್ಣಗೊಂಡಿವೆ.

12 ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ
ಮುಫಸ್ಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಖಿಲಾಫತ್‌ಪುರ ಗ್ರಾಮದ ಛಾವಿ ಮುಸಾಹರ್ ಸುಮಾರು 12 ವರ್ಷಗಳ ಹಿಂದೆ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸಂಬಂಧಿಕರು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅವರು ಸತ್ತಿದ್ದಾರೆಂದು ಕುಟುಂಬದವರು ಅಂತಿಮ ವಿಧೀವಿಧಾನಗಳನ್ನು ಮಾಡಿ ಮುಗಿಸಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಯುವಕನೊಬ್ಬ ದಾರಿ ತಪ್ಪಿ ಪಾಕಿಸ್ತಾನಕ್ಕೆ ಹೋಗಿ ಜೈಲಿನಲ್ಲಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಸಿಕ್ಕಿತ್ತು. ಛಾವಿ ಮುಸಾಹರ್ ಅವರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಕರಾಚಿ ಜೈಲಿನಲ್ಲಿರಿಸಿತ್ತು.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಅಟ್ಟಾರಿ ಗಡಿಯಲ್ಲಿ ಭಾರತಕ್ಕೆ ಕಾಣೆಯಾದ ಯುವಕನ ಹಸ್ತಾಂತರ

ಅಮನ್ ಸಮೀರ್ ಅವರಿಂದ ಪಡೆದ ಮಾಹಿತಿಯ ಪ್ರಕಾರ, ಮಾಹಿತಿ ವಿನಿಮಯದ ನಂತರ ಪಂಜಾಬಿನ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನ ಸರ್ಕಾರವು ಯುವಕನನ್ನು ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ. ಯುವಕನನ್ನು ಗುರುದಾಸ್‌ಪುರ ಜಿಲ್ಲಾಧಿಕಾರಿಗೆ ಬಿಎಸ್‌ಎಫ್ ಹಸ್ತಾಂತರಿಸಿದೆ. ಗುರುದಾಸ್‌ಪುರ ಜಿಲ್ಲಾಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಎಸ್ಪಿ ಸೂಚನೆ ಮೇರೆಗೆ ಯುವಕರನ್ನು ಕರೆತರಲು ಪೊಲೀಸ್‌ ತಂಡವೊಂದು ಗುರುದಾಸ್‌ಪುರಕ್ಕೆ ತೆರಳಿದೆ.
ಬಕ್ಸರ್ ಎಸ್ಪಿ ನೀರಜ್ ಕುಮಾರ್ ಸಿಂಗ್ ಮಾತನಾಡಿ, ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಖಿಲಾಫತ್‌ಪುರ ಗ್ರಾಮದಲ್ಲಿ ನಾಪತ್ತೆಯಾಗಿರುವ ಯುವಕನನ್ನು ಕರೆತರಲು ತಂಡವನ್ನು ಪಂಜಾಬ್‌ಗೆ ಕಳುಹಿಸಲಾಗಿದೆ. ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಬಕ್ಸಾರಗೆ ಕರೆತರಲಾಗುತ್ತದೆ. ಯುವಕನನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement