ಮಣ್ಣಿನ ರಿಂಗ್‌ಗಳನ್ನು ಅಳವಡಿಸಿದ ಪುರಾತನ ಕಾಲದ ಬಾವಿ ಪತ್ತೆ..!

ಮಾಗಡಿ (ರಾಮನಗರ): ತಾಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನ ರೈತನ ಜಮೀನಿನಲ್ಲಿ ಭೂಮಿ ಸಮಗೊಳಿಸುತ್ತಿದ್ದಾಗಮಣ್ಣಿನ ರಿಂಗ್‌ಗಳನ್ನು ಅಳವಡಿಸಿರುವ ಪುರಾತನ ಕಾಲದ ಸಿಹಿನೀರಿನ ಬಾವಿ ಪತ್ತೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ತಿಳಿಸಿದ್ದಾರೆ.
ಕಲ್ಯಾಬೆಟ್ಟದ ತಪ್ಪಲಿನಲ್ಲಿ ವಿಜಯನಗರ ಅರಸು ಬುಕ್ಕರಾಯನ ಧರ್ಮಸಮನ್ವಯ ಶಿಲಾ ಶಾಸನ ಸುರಕ್ಷಣೆಯ ಕಾಮಗಾರಿ ವೀಕ್ಷಿಸಿದ ನಂತರ ಅವರು ಮಾಹಿತಿ ನೀಡಿದರು ಎಂದು ಆಂದೋಲನ.ಇನ್‌ ವರದಿ ಮಾಡಿದೆ.

ವೈಷ್ಣವ, ಶೈವ, ಜೈನ, ಬೌದ್ಧರ ನೆಲೆಯಾಗಿದ್ದ ಕಲ್ಯಾದ ಸಾಂಸ್ಕೃತಿಕ, ಚಾರಿತ್ರಿಕ ಶಿಲಾಶಾಸನ, ವೀರಗಲ್ಲು, ಕೆರೆಕಟ್ಟೆ ಕಲ್ಯಾಣಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಪತ್ತೆಯಾಗಿರುವ ಸಿಹಿನೀರಿನ ಬಾವಿಯಲ್ಲಿ ಇಂದಿಗೂ ನೀರಿದ್ದು, ಬಾವಿಯಲ್ಲಿ ಮಣ್ಣಿನ ರಿಂಗ್‌ಗಳನ್ನು ಜೋಡಿಸಿ ಕಟ್ಟಿರುವ ಬಗ್ಗೆ ಇತಿಹಾಸ ಸಂಶೋಧಕರು ಸಂಶೋಧನೆ ಮಾಡುವ ಮೂಲಕ ಬಾವಿಯ ಮಹತ್ವವನ್ನು ಕಂಡುಹಿಡಿಯಬೇಕಿದೆ’ ಎಂದು ತಿಳಿಸಿದರು ಎಂದು ವರದಿ ಹೇಳಿದೆ.

ಇತಿಹಾಸ ಸಂಶೋಧಕರ ಡಾ.ಮುನಿರಾಜಪ್ಪ ಮಾತನಾಡಿ, ‘ಸಿಂಧುಕೊಳ್ಳದ ನಾಗರಿಕತೆಯ ಕಾಲದಲ್ಲಿ ಸುಟ್ಟ ಇಟ್ಟಿಗೆಗಳನ್ನು ಬಳಸಿ, ಸಿಹಿನೀರಿನ ಬಾವಿಗಳನ್ನು ನಿರ್ಮಿಸಲಾಗುತ್ತಿತ್ತು. ಕಲ್ಯಾದ ಚಾರಿತ್ರಿಕ ಅಂಶಗಳು ಸಿಂಧುಕೊಳ್ಳದ ನಾಗರಿಕತೆಯ ಕುರುಹುಗಳನ್ನು ಪ್ರತಿಬಿಂಬಿಸುತ್ತಿದೆ. ದೊರತಿರುವ ಮಣ್ಣಿನ ರಿಂಗ್‌ಗಳಿಂದ ನಿರ್ಮಿಸಲಾಗಿರುವ ಸಿಹಿನೀರಿನ ಬಾವಿಯ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement