ಪಂಪ್‌ಸೆಟ್‌ ಮೋಟರ್‌ ಸ್ಟಾರ್ಟ್‌ ಮಾಡಲು ಹೋದಾಗ ವಿದ್ಯುತ್ ತಗುಲಿ ಸಹೋದರರ ಸಾವು

ವಿಜಯಪುರ : ತೋಟದ ಬಾವಿಯ ಪಂಪ್‌ ಸೆಟ್‌  ಮೋಟಾರ್ ಸ್ಟಾರ್ಟ್‌ ಮಾಡಲು ಹೋದಾಗ ವಿದ್ಯುತ್ ತಗುಲಿ ಇಬ್ಬರು ಸಹೋದರರು ಸಾಔಿಗೀಡಾದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.‌

ಮೃತರನ್ನು ಮುದ್ದುಗೌಡ ಅಪ್ಪಾ ಸಾಹೇಬ್ ಪಾಟೀಲ(22) ಹಾಗೂ ಶಿವರಾಜ್ ಅಪ್ಪಾ ಸಾಹೇಬ್ ಪಾಟೀಲ (18) ಎಂದು ಗುರುತಿಸಲಾಗಿದೆ. . ಅಣ್ಣ-ತಮ್ಮ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಅಣ್ಣ ಮುದ್ದುಗೌಡ ಮೋಟಾರ್ ಸ್ಟಾರ್ಟ್‌ ಮಾಡಲು ಹೋದಾಗ ಆತನಿಗೆ ವಿದ್ಯುತ್ ತಗುಲಿದ್ದು,. ಇದನ್ನು ಬಿಡಿಸಲು ಹೋದ ತಮ್ಮ ಶಿವರಾಜ್‌ಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

3 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಪಟ್ಟಣದ ಹೆಸರು ಬದಲಾವಣೆಗೆ ಸಚಿವ ಸಂಪುಟ ಅನುಮೋದನೆ

  1. Nivedita

    Please remove sensitive video from the blog or add blurred videos.

ನಿಮ್ಮ ಕಾಮೆಂಟ್ ಬರೆಯಿರಿ

advertisement