ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ನಿಲ್ದಾಣದಿಂದ ಜಿಗಿದ ಹುಡುಗಿಯನ್ನು ರಕ್ಷಿಸಿದ ಸಿಐಎಸ್‌ಎಫ್ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯೋಧರು ಇಂದು, ಗುರುವಾರ ಮುಂಜಾನೆ ಕಟ್ಟಡದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಹುಡುಗಿಯೊಬ್ಬಳ ಜೀವ ಉಳಿಸಿದ್ದಾರೆ.
ಅಕ್ಷರಧಾಮ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7:28-7:50ರ ನಡುವೆ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ಸೈಡ್‌ವಾಲ್‌ನ ಎತ್ತರದ ತುದಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಹುಡುಗಿಯನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದರು.

ಗೋಡೆಯ ಅಂಚಿನಲ್ಲಿ ಎತ್ತರದಲ್ಲಿ ನಿಂತಿದ್ದ ಹುಡುಗಿಯನ್ನು ಗಮನಿಸಿದ ಸಿಐಎಸ್ಎಫ್ ಜವಾನ ತಕ್ಷಣವೇ ತನ್ನ ಶಿಫ್ಟ್ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಅನೇಕ ಸಿಐಎಸ್ಎಫ್ ಜವಾನರು ಮತ್ತು ಡಿಎಂಆರ್‌ಸಿ ನೌಕರರು ಸ್ಥಳಕ್ಕೆ ಧಾವಿಸಿದರು, ಅಲ್ಲಿ ಅವರು ಯುವತಿಯನ್ನು ಕೆಳಗೆ ಹಾರದಂತೆ ತಡೆಯಲು ಪ್ರಯತ್ನಿಸಿದರು. ಆದರೆ ಅವರು ಪದೇ ಪದೇ ಮನವಿ ಮಾಡಿದರೂ ಆಕೆಯನ್ನು ಮನವೊಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅವಳು ಕಟ್ಟಡದ ತುದಿಯಿಂದ ತಾನು ಹೊರಬರುವುದಿಲ್ಲ ಎಂದು ಹೇಳುತ್ತಲೇ ಇದ್ದಳು.
ಏತನ್ಮಧ್ಯೆ, ಶಿಫ್ಟ್-ಇನ್-ಚಾರ್ಜ್, ಹುಡುಗಿ ತುದಿಯಿಂದ ಕೆಳಗೆ ಹಾರಿದರೆ ಪೆಟ್ಟಾಗುವುದನ್ನು ತಡೆಯಲು ನೆಲದ ಮೇಲೆ ಬೀಳದಂತೆ ಾವಳನ್ನು ಹಿಡಿಯಲು ದಪ್ಪ ಹೊದಿಕೆಯನ್ನು ಜೋಡಿಸಲು ಇತರರೊಂದಿಗೆ ಸೇರಿ ವ್ಯವಸ್ಥೆ ಮಾಡಿದರು.

ಓದಿರಿ :-   ದೆಹಲಿ ಗಲಭೆ ಆರೋಪಿ, ಪೊಲೀಸರತ್ತ ಗನ್ ತೋರಿಸಿದವನಿಗೆ ಹೀರೊ ರೀತಿ ಸ್ವಾಗತ....! ವೀಕ್ಷಿಸಿ

ಕೊನೆಗೂ ಹುಡುಗಿ ಕಟ್ಟಡದ ತುದಿಯಿಂದ ಕೆಳಕ್ಕೆ ಜಿಗಿದೇ ಬಿಟ್ಟಳು. ಆದರೆ ಕೆಳಗಿದ್ದವರು ಅವಳನ್ನು ರಕ್ಷಿಸಲು ಜೋಡಿಸಿದ್ದ ದಪ್ಪನೆಯ ಹೊದಿಕೆಗೆ ಸಿಕ್ಕಿಹಾಕಿಕೊಂಡಳು. ಅದೃಷ್ಟವಶಾತ್ ಅವಳಿಗೆ ಯಾವುದೇ ದೊಡ್ಡ ಗಾಯಗಳಾಗಿಲ್ಲ.
ಆಕೆಯ ಬಲಗಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ತಕ್ಷಣವೇ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿಐಎಸ್ಎಫ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಘಟನೆಯ ವೀಡಿಯೊ ಹಂಚಿಕೊಂಡಿದೆ, ಸಿಐಎಸ್ಎಫ್ ಸಿಬ್ಬಂದಿಯ ತ್ವರಿತ ಮತ್ತು ವಿವೇಕಯುತ ಪ್ರಯತ್ನದಿಂದ ಅಕ್ಷರಧಾಮ ಮೆಟ್ರೋ ನಿಲ್ದಾಣದಿಂದ ಜಿಗಿದ ಹುಡುಗಿಯ ಜೀವ ಉಳಿದಿದೆ ಎಂದಿ ಪೋಸ್ಟ್‌ ಮಾಡಿದ್ದಾರೆ.
ಉದ್ವಿಗ್ನ ಪರಿಸ್ಥಿತಿಯಲ್ಲಿ ತ್ವರಿತ ಕ್ರಮಕ್ಕಾಗಿ ಸಿಐಎಸ್ಎಫ್ ಸಿಬ್ಬಂದಿಯನ್ನು ಅನೇಕ ಕಾಮೆಂಟರ್ಸ್ ಶ್ಲಾಘಿಸಿದ್ದಾರೆ. ಅನೇಕರು “ಸೆಲ್ಯೂಟ್” ಎಂದು ಕಾಮೆಂಟ್ ಮಾಡಿದರೆ, ಇನ್ನೂ ಹಲವರು ಸಿಐಎಸ್ಎಫ್ ಯಾವಾಗಲೂ ಜೀವಗಳನ್ನು ಉಳಿಸುತ್ತಿರುವುದನ್ನು ಶ್ಲಾಘಿಸಿದರು.

ಓದಿರಿ :-   ವೀಸಾ ಲಂಚ ಪ್ರಕರಣ: ಕಾರ್ತಿ ಚಿದಂಬರಂ ಅವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿದ ಸಿಬಿಐ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ