ಉಡವನ್ನೂ ಬಿಡದ ಕಾಮುಕರು… ಬೆಂಗಾಲ್ ಮಾನಿಟರ್ ದೈತ್ಯ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ…!-ನಾಲ್ವರ ಬಂಧನ

ಮುಂಬೈ: ವಿಲಕ್ಷಣ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಗೋಠಾಣೆ ಗ್ರಾಮದ ಬಳಿಯಿರುವ ಸಹ್ಯಾದ್ರಿ  ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳದ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ…!
ವರದಿಗಳ ಪ್ರಕಾರ, ನಾಲ್ವರು ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿನ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್‌ಗೆ ಪ್ರವೇಶಿಸಿ ಬಂಗಾಳದ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಈ ಘಟನೆ ಕುರಿತು ಅರಣ್ಯ ಅಧಿಕಾರಿಯೊಬ್ಬರು ಬುಧವಾರ (ಏಪ್ರಿಲ್ 13) ಮಾಹಿತಿ ನೀಡಿದ್ದಾರೆ. ರತ್ನಗಿರಿ ಜಿಲ್ಲೆಯ ಗೋಠಾನೆ ಗ್ರಾಮದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳು ಮೀಸಲು ಪ್ರದೇಶದ ಭಾಗವಾಗಿರುವ ಚಂದೋಲಿ ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ ಕೆಲ ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಾಲ್ವರಲ್ಲಿ ಒಬ್ಬ ಬೇಟೆಯಾಡಲು ಬಂದೂಕು ಹಿಡಿದುಕೊಂಡಿದ್ದ ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಗಳು ಕಾಡಿನಲ್ಲಿ ತಿರುಗಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಮಹಾರಾಷ್ಟ್ರ ಅರಣ್ಯ ಇಲಾಖೆಯು ಆರಂಭದಲ್ಲಿ ಬೇಟೆಯ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿದ್ದರು. ನಂತರ ಅಧಿಕಾರಿಗಳು ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರವೆಸಗುವ ವೀಡಿಯೊ ಕಂಡುಬಂದಿದೆ. ಅಧಿಕಾರಿಗಳ ಪ್ರಕಾರ, ಆರೋಪಿಗಳು ನಾಲ್ಕೂವರೆ ಅಡಿ ಉದ್ದದ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಈ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ಅಪರಾಧ ಬೆಳಕಿಗೆ ಬಂದಾಗ ಅಕ್ರಮವಾಗಿ ಅರಣ್ಯಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಮಾರ್ಚ್ 31 ರಂದು ಪ್ರಕರಣ ದಾಖಲಿಸಿದ ನಂತರ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ (STR) ನಾಲ್ಕು ಜಿಲ್ಲೆಗಳಾದ ಸತಾರಾ, ಸಾಂಗ್ಲಿ, ಕೊಲ್ಹಾಪುರ ಮತ್ತು ರತ್ನಗಿರಿಯಲ್ಲಿ ಹರಡಿಕೊಂಡಿದೆ.
ಆರೋಪಿಗಳನ್ನು ಸಂದೀಪ್ ತುಕಾರಾಂ ಪವಾರ್, ಮಂಗೇಶ್ ಕಾಮ್ಟೇಕರ್, ಅಕ್ಷಯ್ ಕಾಮ್ಟೇಕರ್ ಮತ್ತು ರಮೇಶ್ ಘಾಗ್ ಎಂದು ಗುರುತಿಸಲಾಗಿದೆ.
“ನಾವು ಆರೋಪಿಗಳಿಂದ ಎಲ್ಲಾ ಸಂಬಂಧಿತ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅವರನ್ನು ಆರಂಭದಲ್ಲಿ ಅರಣ್ಯ ಇಲಾಖೆ ಕಸ್ಟಡಿಗೆ ನೀಡಲಾಯಿತು, ಆದರೆ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರತಿ ಸೋಮವಾರ ಪ್ರಕರಣದ ತನಿಖೆ ನಡೆಸುತ್ತಿರುವ ಅರಣ್ಯಾಧಿಕಾರಿಗಳ ಮುಂದೆ ಹಾಜರಿರಬೇಕು ತಿಳಿಸಲಾಗಿದೆ ಎಂದು ಅವರು ಹೇಳಿದರು.

ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಸಹ್ಯಾದ್ರಿ ಹುಲಿ ಸಂರಕ್ಷಿತ (ಎಸ್‌ಟಿಆರ್) ಕ್ಷೇತ್ರ ನಿರ್ದೇಶಕ ನಾನಾಸಾಹೇಬ್ ಲಾಡ್ಕಟ್ ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅವರ ವಿರುದ್ಧ ಸಲ್ಲಿಸಬೇಕಾದ ಸಂಬಂಧಿತ ಆರೋಪಗಳ ಕುರಿತು ಚರ್ಚಿಸಲು ಅಧಿಕಾರಿಗಳು ಈಗ ಕಾನೂನು ತಜ್ಞರೊಂದಿಗೆ ವಿಷಯವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.
ಬಂಗಾಳದ ಮಾನಿಟರ್ ಹಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಅಡಿಯಲ್ಲಿ ಸಂರಕ್ಷಿತ ಜಾತಿ ಹಲ್ಲಿಯಾಗಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement