ಕುಮಟಾ: ಅದ್ಧೂರಿಯಾಗಿ ನಡೆದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಹೆಸರುವಾಸಿ ಜಾತ್ರೆಗಳಲ್ಲೊಂದಾದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಶನಿವಾರ ನಡೆಯಿತು.
ಇದು ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆ ದಿನದಂದು ನಡೆಯುತ್ತದೆ.ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ರಥೋತ್ಸವ ಸ್ಥಗಿತವಾಗಿತ್ತು.ಈ ವರ್ಷ ಯಾವುದೇ ಆತಂಕವಿಲ್ಲದೆ ರಥೋತ್ಸವ ಅದ್ಧೂರಿಯಾಗಿ ಸಂಪನ್ನವಾಯಿತು.

ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. ಅನೇಕರು ಶ್ರೀದೇವಿಯ ರಥಕ್ಕೆ ತೆಂಗಿನ ಕಾಯಿಯ ಗೊಂಚಲು ಹರಕೆ, ಈಡುಗಾಯಿ ಒಡೆಯುವುದು, ರಥಕ್ಕೆ ಬಾಳೆಹಣ್ಣು,ಕಿ ತ್ತಲೆ ಹಣ್ಣನ್ನು ಎಸೆಯುವುದರ ಹರಕೆ ಪೂರೈಸಿದರು.

ರಥೋತ್ಸವಕ್ಕೆ ಸಂಬಂಧಿಸಿದಂತೆ ೫ ದಿನ ರಥೋತ್ಸವದ ಸಂಪ್ರದಾಯ ಇರುತ್ತದೆ. ಶ್ರೀದೇವಿಯ ಪಲ್ಲಕ್ಕಿ ಉತ್ಸವವು ಗ್ರಾಮದ ಪರಿವಾರ ದೇವಾಲಯಕ್ಕೆ ತೆರಳಿ ಸಂಪ್ರದಾಯವನ್ನು ನಡೆಸುವುದು ವಾಡಿಕೆ. ಇದರೊಂದಿಗೆ ಹೊವಿನ ಮಕ್ಕಳ ಕುಣಿತ, ಕಳಶ ಉತ್ಸವವು ಹೆಚ್ಚು ಆಕರ್ಷಕವಾಗಿತ್ತು.

ರಥೋತ್ಸವದ ಸಂದರ್ಭದಲ್ಲಿ ಶ್ರೀದೇವಿ ಪಲ್ಲಕ್ಕಿ ಕಾಗಾಲ ಲೋಕೇಶ್ವರ ದೇವಾಲಯ, ತಂಬ್ಲೇಮಠದ ಗಣಪತಿ ದೇವಾಲಯ, ತೆಪ್ಪದಮಠದ ಶ್ರೀಲಕ್ಷ್ಮೀ ನರಸಿಂಹ ದೇವಾಲಯಕ್ಕೆ ತೆರಳುತ್ತದೆ. .

ಈ ವರ್ಷ ತೆಪ್ಪದಮಠದಲ್ಲಿ ಹೂವಿನ ಮಕ್ಕಳ ಕುಣಿತ ಆಕರ್ಷವಾಗಿತ್ತು. ತಲೆ ತುಂಬಾ ವಿಗ್ ರೀತಿಯಲ್ಲಿ ಪೋಣಿಸಿದ ಕೆಂಪು ಕುಸುಮಾಲೆ ಹೂವಿನ ಮಾಲೆ ,ಕುತ್ತಿಗೆಯಲ್ಲಿ ಗೊವೆ ಸಂಪಿಗೆ ಬಿಳೆ ಹೂವಿನ ಮಾಲೆ ಹೂವಿನ ಮಕ್ಕಳು ಧರಿಸುವುದು ಸಂಪ್ರದಾಯ.

ಇವರು ತಮ್ಮ ಕುಟುಂಬದ ತೇಜದಂತೆ ಗದ್ದೆ ಸಾಗುವಳಿಯ ದೃಷ್ಯವನ್ನು ತಮ್ಮ ಕುಣಿತದ ಮೂಲಕ ತೋರಿಸಿದ್ದು ಅದ್ಭತವಾಗಿತ್ತು. ಪ್ರಮುಖ ಅಮ್ಮನವರ ಕಳಶ,ಹೊಸಬ ದೇವರ ಕಳಶ,ಕಡಬ ದೇವರ ಕಳಶ ಹೀಗೆ ಮೂರು ಕಳಶ ವು ದೇವಿಯ ರಥೋತ್ಸವದಲ್ಲಿ ಭಾಗವಹಿಸುವದು.
ರಥೋತ್ಸವದ ನಂತರ ಮೃಗ ಬೆಟೆ ಸಂಪ್ರದಾಯವು ಆಕರ್ಷಕವಾಗಿತ್ತು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement