ಬದಲಾವಣೆಗೆ ಸಾಧನವಾಗಿ, ಪರಿವರ್ತನೆ ಮಾರ್ಗ ಕರ್ನಾಟಕದಿಂದಲೇ ಆಗಲಿ:ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡ್ಡಾ ಸಂದೇಶ

posted in: ರಾಜ್ಯ | 0

ಹೊಸಪೇಟೆ : ಬದಲಾವಣೆ ಅವಶ್ಯ ಹಾಗೂ ಅನಿವಾರ್ಯ. ನಾವು ಬದಲಾವಣೆಯ ಸಾಧನವಾಗಬೇಕು. ದಕ್ಷಿಣ ಭಾರತದಲ್ಲಿ ಪರಿವರ್ತನೆಯ ಮಾರ್ಗ ಕರ್ನಾಟಕದಿಂದ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಸಂದೇಶವೊಂದನ್ನು ರವಾನಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಕ್ಷದ ಕಾರ್ಯ ಇನ್ನಷ್ಟು ಆಗಬೇಕು. ದೇಶ ಮೊದಲು, ನಂತರ ಪಕ್ಷ, ನಂತರ ವ್ಯಕ್ತಿ ಎಂಬುದು ನಮ್ಮ ಪಕ್ಷದ ಧ್ಯೇಯ ಎಂದು ಹೇಳಿದರು.
ನಮ್ಮ ಗುರಿ ಸ್ಪಷ್ಟ, ನಾವು ಕುರ್ಚಿ ಆಕ್ರಮಿಸಿಕೊಳ್ಳಲು ನೌವು ಇಲ್ಲ, ಶಾಸಕ, ಸಂಸದರಾಗುವುದು ಸಮಾಜದಲ್ಲಿ ಬದಲಾವಣೆಗಾಗಿ, ನಾವು ಕೆಲಸ ಮಾಡುವ ಸಾಧನವಾಗಬೇಕು ಎಂದು ಪಕ್ಷದ ಪ್ರಮುಖರಿಗೆ ಸೂಚ್ಯವಾಗಿ ಸಂದೇಶ ರವಾನಿಸಿದರು.

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಹಳ್ಳಿಗಳು, ವಂಚಿತರು, ಬಡವರು, ಶೋಷಿತರು, ಮಹಿಳೆಯರು ಶ್ರಮಿಕರು, ಯುವ ಸಮೂಹದ ಪರಿವರ್ತನೆಗೆ ಬದ್ಧತೆ ತೋರಬೇಕಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ”ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಈಗ ನ್ಯಾಷನಲ್ಅಲ್ಲ, ಅದು ಕೇವಲ ಎರಡು ರಾಜ್ಯಕ್ಕೆ ಸೀಮಿತವಾಗಿ ಮೂಲೆ ಗುಂಪಾಗಿದೆ ಎಂದು ವಾಗ್ದಾಳಿ ನಡೆಸಿದರು.
ಒಡಿಶಾದಲ್ಲಿ ಬಿಜೆಡಿ, ಆಂಧ್ರದಲ್ಲಿ ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ, ಕರ್ನಾಟಕದ ಜೆಡಿಎಸ್ ಎಲ್ಲವೂ ಕೌಟುಂಬಿಕ ಪಕ್ಷಗಳಾಗಿವೆ’ಎಂದರು.

ಓದಿರಿ :-   ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ

ಬರಲಿರುವ ಚುನಾವಣೆಗೆ ಹೇಗೆ ಸಿದ್ದವಾಗಬೇಕು, ಸರಕಾರದ ಕೆಲಸದ ಬಗ್ಗೆ ಹೇಗೆ ಜನರಿಗೆ ಮನವರಿಕೆ ಮಾಡುವುದು ಎನ್ನುವ ಕುರಿತು ತೀರ್ಮಾನಿಸಿ. ನಮಗೆ ಯಡಿಯೂರಪ್ಪ ಅವರ ಆಶೀರ್ವಾದ ದೊರಕಿದೆ. ನಾವು ಜನರನ್ನು ಮನವರಿಕೆ ಮಾಡುವ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರೈತರ ಸಶಕ್ತೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ. ಕೇಂದ್ರ ಸರಕಾರ ಕರ್ನಾಟಕದಲ್ಲಿ 10 ರೈಲ್ವೆ ಯೋಜನೆಗಳನ್ನು ಅನುಮೋದಿಸಿದೆ ಮತ್ತು ಅವುಗಳಿಗೆ ಹಣಕಾಸಿನ ನೆರವು ನೀಡಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ 46.31 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ