ಆಜಾನ್‌ ಹೇಳುವ ಸಮಯದ 15 ನಿಮಿಷಗಳ ಮೊದಲು-ನಂತರ ಹನುಮಾನ್ ಚಾಲೀಸಾ, ಭಜನೆಗಳನ್ನು ಧ್ವನಿವರ್ಧಕದಲ್ಲಿ ಹಾಕುವಂತಿಲ್ಲ: ನಾಸಿಕ್‌ ಪೊಲೀಸರು..!

ನಾಸಿಕ್‌: ಆಜಾನ್ ವಿವಾದದ ಮಧ್ಯೆ, ನಾಸಿಕ್ ಪೊಲೀಸರು ಈಗ ಆಜಾನ್ ಮಾಡುವ 15 ನಿಮಿಷಗಳ ಮೊದಲು ಮತ್ತು ನಂತರ 15 ನಿಮಿಷಗಳ ವರೆಗೆ ಹನುಮಾನ್ ಚಾಲೀಸಾ ಅಥವಾ ಭಜನೆಗಳನ್ನು ಧ್ವನಿವರ್ಧಕಗಳಲ್ಲಿ ಹಾಕುವುದನ್ನು ನಿಷೇಧಿಸಿದ್ದಾರೆ.
ಅಲ್ಲದೆ, ಧಾರ್ಮಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಧ್ವನಿವರ್ಧಕಗಳ ಬಳಕೆಯನ್ನು ಪೊಲೀಸರು ನಿಷೇಧಿಸಿದ್ದಾರೆ. ಈಗ, ಎಲ್ಲಾ ಧಾರ್ಮಿಕ ಸ್ಥಳಗಳು ಧ್ವನಿವರ್ಧಕಗಳನ್ನು ಬಳಸಲು ಮೇ 3 ರೊಳಗೆ ಪರವಾನಗಿ ಪಡೆಯಬೇಕು.
ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರ ಕುರಿತು ತೀವ್ರ ವಿವಾದದ ನಡುವೆ, ನಾಸಿಕ್ ಪೊಲೀಸರು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೇ 3ರ ಮೊದಲು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
“ಮೇ 3 ರೊಳಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ತೆಗೆದುಕೊಳ್ಳುವಂತೆ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ನಿರ್ದೇಶನ ನೀಡಲಾಗಿದೆ. ಮೇ 3 ರ ನಂತರ ಯಾರಾದರೂ ಆದೇಶವನ್ನು ಉಲ್ಲಂಘಿಸುವುದು ಕಂಡುಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ನಾಸಿಕ್ ಪೊಲೀಸ್ ಕಮಿಷನರ್ ದೀಪಕ್ ಪಾಂಡೆ ಹೇಳಿದ್ದಾರೆ.
ಹನುಮಾನ್ ಚಾಲೀಸಾ ಅಥವಾ ಭಜನೆಗಳನ್ನು ನುಡಿಸಲು ಅನುಮತಿ ತೆಗೆದುಕೊಳ್ಳಬೇಕು. ಅಜಾನ್‌ಗೆ 15 ನಿಮಿಷಗಳ ಮೊದಲು ಮತ್ತು ನಂತರ ಇದನ್ನು ಅನುಮತಿಸಲಾಗುವುದಿಲ್ಲ. ಅಲ್ಲದೆ, ಮಸೀದಿಯ 100 ಮೀಟರ್ ಒಳಗೆ ಇದನ್ನು ಅನುಮತಿಸಲಾಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಈ ಆದೇಶದ ಉದ್ದೇಶವಾಗಿದೆ ಎಂದು ಪಾಂಡೆ ಹೇಳಿದ್ದಾರೆ.

ಓದಿರಿ :-   ಪೆಟ್ರೋಲ್ ಲೀಟರ್​ಗೆ 9.5 ರೂ.ಗಳು, ಡೀಸೆಲ್ 7 ರೂ.ಗಳಷ್ಟು ಇಳಿಕೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ಎಲ್ಲ ಧಾರ್ಮಿಕ ಸ್ಥಳಗಳು ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವುದೇ ಅನಧಿಕೃತವಾಗಿ ಧ್ವನಿವರ್ಧಕಗಳ ಬಳಕೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ದಂಡದ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ದಿಲೀಪ್ ವಾಲ್ಸೆ-ಪಾಟೀಲ್ ಹೇಳಿದ್ದಾರೆ.
ನಾವು ಎಲ್ಲಾ ಧ್ವನಿವರ್ಧಕಗಳು ಮತ್ತು ಡಿಜೆಗಳನ್ನು ಮುಚ್ಚುವಂತೆ ಆದೇಶವನ್ನು ನೀಡಿದ್ದೇವೆ. ಯಾರೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ಯಾರಾದರೂ ಶಾಂತಿ ಕದಡಲು ಪ್ರಯತ್ನಿಸಿದರೆ, ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಅಜಾನ್‌ಗೆ 15 ನಿಮಿಷಗಳ ಮೊದಲು ಮತ್ತು 15 ನಿಮಿಷಗಳ ನಂತರದ ವರೆಗೆ ಮಸೀದಿಗಳ 100 ಮೀಟರ್ ವ್ಯಾಪ್ತಿಯಲ್ಲಿ ಹನುಮಾನ್ ಚಾಲೀಸಾ ಪಠಣ ಮತ್ತು ಇತರ ಚಟುವಟಿಕೆಗಳಿಗೆ ಧ್ವನಿವರ್ಧಕಗಳನ್ನು ಅನುಮತಿಸಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಕಳೆದ ವಾರ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದ ನಂತರ ಮೇ 3 ರೊಳಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ಎಂಎನ್‌ಎಸ್ ಪ್ರತಿದಿನ ಐದು ಬಾರಿ ಮಸೀದಿಗಳ ಹೊರಗೆ ಲೌಡ್ ಸ್ಪೀಕರ್‌ಗಳಲ್ಲಿ ಹನುಮಾನ್ ಸ್ತೋತ್ರ ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಓದಿರಿ :-   ನಿಮ್ಮ ಹೆಸರು ಮೊಹಮ್ಮದ್? : ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಥಳಿತ, ನಂತರ ಶವವಾಗಿ ಪತ್ತೆ

ರಾಜ್ ಠಾಕ್ರೆ ಪ್ರಕಾರ, ಧ್ವನಿವರ್ಧಕಗಳಲ್ಲಿ ‘ಆಜಾನ್’ ಹೇಳುವುದು ಧಾರ್ಮಿಕ ವಿಷಯಕ್ಕಿಂತ ಸಾಮಾಜಿಕ ಸಮಸ್ಯೆಯಾಗಿದೆ. ಧ್ವನಿವರ್ಧಕಗಳ ಬಳಕೆಯನ್ನು ಮುಂದುವರೆಸಿದರೆ ಮುಸ್ಲಿಮರು ಕೂಡ “ನಮ್ಮ ಪ್ರಾರ್ಥನೆಯನ್ನು ಧ್ವನಿವರ್ಧಕದಲ್ಲಿ ಆಲಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಅವರು ಮೇ 1 ರಂದು ಸಂಭಾಜಿನಗರ (ಔರಂಗಾಬಾದ್) ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೂನ್ 5 ರಂದು, MNS ಕಾರ್ಯಕರ್ತರೊಂದಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುವುದಾಗಿ ಠಾಕ್ರೆ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ