ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿಯೇ ಪಠ್ಯದಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣ ವಿಭಾಗದಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಈ ವರ್ಷದಿಂದಲೇ ಭಗವದ್ಗೀತೆಯು ಸೇರ್ಪಡೆಯಾದರೂ ಆದರೆ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಇದು ನೈತಿಕ ಶಿಕ್ಷಣದ ಭಾಗವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಪಠ್ಯದಲ್ಲಿ ಸೇರಿಸುವಂತೆ ಸಾಕಷ್ಟು ಬೇಡಿಕೆಗಳು ಬಂದಿವೆ. ಆದ್ದರಿಂದ ಪಂಚತಂತ್ರ, ರಾಮಾಯಣ, ಮಹಾಭಾರತ, ಸೇರಿದಂತೆ ನೈತಿಕ ವಿಜ್ಞಾನದ ಅಂಶಗಳನ್ನು ಸೇರಿಸಲಾಗುತ್ತದೆ ಎಂದು ತಿಳಿಸಿದರು.

೨೦೨೨-೨೩ರ ಸಾಲಿನಲ್ಲಿ ನೈತಿಕ ಶಿಕ್ಷಣದ ವಿಭಾಗದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಮಕ್ಕಳ ನೈತಿಕ ಶಿಕ್ಷಣ ಭಾಗವಾಗಿರಲಿದೆ. ಯಾವುದೇ ಧರ್ಮಕ್ಕೆ ಸೀಮಿತ ಮಾಡವುದಿಲ್ಲ, ಉತ್ತಮ ಅಂಶಗಳು ನಮ್ಮ ಮಕ್ಕಳಿಗೆ ಒಳ್ಳೆಯದು ಮಾಡುವುದಾದರೆ ಅದು ಯಾವುದೇ ಧರ್ಮದ್ದಾದರೂ, ಅವುಗಳನ್ನು ಅಳವಡಿಕೆ ಮಾಡುತ್ತೇವೆ. ಧರ್ಮಗಳನ್ನು ವಿಭಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಠ್ಯದಿಂದ ಟಿಪ್ಪು ಮೈಸೂರು ಹುಲಿ ಎಂಬುದನ್ನು ಕೈ ಬಿಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತಾಗಿ ಸಾಕ್ಷಿ ಸಹಿತ ಬೇಡಿಕೆ ಇಟ್ಟಿದ್ದಾರೆ‌ ಎಂದರು. ಟಿಪ್ಪು ಪಾಠವನ್ನು ಕೈಬಿಡುವುದಿಲ್ಲ ಎಂದಾದರೆ ಟಿಪ್ಪುವಿನ ಎಲ್ಲ ಮುಖವನ್ನೂ ತೋರಿಸಿ. ಟಿಪ್ಪು ಕನ್ನಡ ವಿರೋಧಿಯಾಗಿದ್ದರು. ಕನ್ನಡ ಭಾಷೆ ಬದಲಾಗಿ ಪರ್ಷಿಯನ್ ಭಾಷೆಯನ್ನು ಆಡಳಿತಕ್ಕೆ ತಂದರು. ಕೊಡಗಿನಲ್ಲಿ ದೌರ್ಜನ್ಯ ಮಾಡಿರುವ ಅಂಶಗಳನ್ನು ಪಠ್ಯದಲ್ಲಿ ಸೇರಿಸುವಂತೆ ಆಗ್ರಹಿಸಿದ್ದಾರೆ. ಟಿಪ್ಪು ಮೈಸೂರು ಹುಲಿ ಎಂಬ ಅಂಶವನ್ನು ಕೈಬಿಟ್ಟಿಲ್ಲ. ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು. ಯಾವ ಅಂಶವನ್ನು ಕೈಬಿಡುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement