ಅರ್ಜೆಂಟೀನಾದಲ್ಲಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬ್ಯೂನಸ್ ಐರಿಸ್ನ ಇಂಇಪೆಂಡೆಂಟ್ ನಿಲ್ದಾಣದಲ್ಲಿ ನಿಂತಿದ್ದ ಇತರ ಪ್ರಯಾಣಿಕರು ಅವಳನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ.
ರೈಲು ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಗಳಲ್ಲಿ ಕ್ಯಾಂಡೆಲಾ ಎಂಬ ಹೆಸರಿನ ಮಹಿಳೆ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಳು. ರೈಲು ಬರುವ ಸಮಯಕ್ಕೆ ಕ್ಯಾಂಡೆಲಾ ಅಸ್ಥಿರಳಾದ ಅವಳು ಜೋಲಿ ಹೊಡೆದು ಮುಗ್ಗರಿಸಿ ವೇಗವಾಗಿ ಬರುತ್ತಿದ್ದ ರೈಲಿನ ಕೆಳಗೆ ಬೀಳುತ್ತಾಳೆ.
ಮಾರ್ಚ್ 29 ರಂದು ಈ ಘಟನೆ ನಡೆದಿದೆ. ಪ್ರಯಾಣಿಕರು ಹೆದರಿದರು ಮತ್ತು ತಕ್ಷಣವೇ ಮಹಿಳೆಗೆ ಸಹಾಯ ಮಾಡಲು ಧಾವಿಸಿದರು.ಕ್ಯಾಂಡೆಲಾ ಅವರನ್ನು ಬ್ಯೂನಸ್ ಐರಿಸ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಾನು ಇನ್ನೂ ಹೇಗೆ ಜೀವಂತವಾಗಿದ್ದೇನೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ”ಎಂದು ಮಹಿಳೆ ಅರ್ಜೆಂಟೀನಾದ ದೂರದರ್ಶನ ಚಾನೆಲ್ಗೆ ತಿಳಿಸಿದ್ದಾರೆ ಎಂದು ಪೋಸ್ಟ್ ವರದಿ ಮಾಡಿದೆ. ಅಪಘಾತದಿಂದ ಬದುಕುಳಿದ ನಂತರ ತಾನು ಮರುಜನ್ಮ ಪಡೆದಿದ್ದೇನೆ ಎಂದು ಕ್ಯಾಂಡೆಲಾ ಹೇಳಿಕೊಂಡಿದ್ದಾಳೆ.
ನಾನು ರಕ್ತದೊತ್ತಡದಲ್ಲಿ (blood pressure) ಹಠಾತ್ ಕುಸಿತ ಅನುಭವಿಸಿದೆ ಮತ್ತು ಮೂರ್ಛೆ ಹೋದೆ. ನಾನು ನನ್ನ ಎದುರಿಗಿದ್ದ ವ್ಯಕ್ತಿಯನ್ನು ಎಚ್ಚರಿಸಲು ಪ್ರಯತ್ನಿಸಿದೆ. ಆದರೆ ನಂತರ ನಾನು ರೈಲಿಗೆ ಡಿಕ್ಕಿ ಹೊಡೆದ ಕ್ಷಣವೂ ನನಗೆ ನೆನಪಿಲ್ಲ ಎಂದು ಅವರು ದೂರದರ್ಶನಕ್ಕೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ