ವೃದ್ಧೆಗೆ ಹೊಡೆದು ಕಾರು ಕದ್ದೊಯ್ದ ವ್ಯಕ್ತಿ ಕೆಲವೇ ಹೊತ್ತಿನಲ್ಲಿ ಶವವಾಗಿ ಪತ್ತೆ..!

ಅಮೆರಿಕದಲ್ಲಿ 72 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕಾರ್‌ ಕದ್ದೊಯ್ದ ವ್ಯಕ್ತಿಯೊಬ್ಬ ಕೆಲವೇ ತಾಸಿನ ನಂತರ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ವಾರ ಸ್ಯಾನ್ ಆಂಟೋನಿಯೊದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಕದ್ದ ಕಾರನ್ನು ಒಯ್ಯುವಾಗ ಢಿಕ್ಕಿ ಹೊಡೆದು ಸಾವಿಗೀಡಾಗಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
72 ವರ್ಷದ ಶಿರ್ಲೀನ್ ಹೆರ್ನಾಂಡೆಜ್ ಡಯಟ್ ಕೋಕ್ ಖರೀದಿಸಲು ಗ್ಯಾಸ್ ಸ್ಟೇಷನ್‌ಗೆ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ಅವರ ಮೇಲೆ ದಾಳಿ ನಡೆಸಿದ್ದಾರೆ. ಮುದುಕಿಯ ಕೀಲಿಕೈ ಕಸಿದುಕೊಳ್ಳುವ ಉದ್ದೇಶದಿಂದ ಮುದುಕಿಯ ಮುಖಕ್ಕೆ ಹಲವು ಬಾರಿ ಹೊಡೆದಿದ್ದಾನೆ.

ನಂತರ ಮೂವರು ಹೆರ್ನಾಂಡೆಜ್‌ಗೆ ಸಹಾಯ ಮಾಡಲು ಧಾವಿಸಿದರೂ ಕಾರ್‌ ಕಳ್ಳ ವೃದ್ಧೆಯ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಪೋಸ್ಟ್ ವರದಿ ಹೇಳಿದೆ.
ಆದರೆ, ಕೆಲವು ಗಂಟೆಗಳ ನಂತರ, ಹೆರ್ನಾಂಡೆಜ್ ದಾಳಿಗೊಳಗಾದ ಗ್ಯಾಸ್ ಸ್ಟೇಷನ್‌ನಿಂದ ಸ್ವಲ್ಪವೇ ದೂರದಲ್ಲಿರುವ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೀಡಾಗಿರುವುದನ್ನು ಪೊಲೀಸರು ಕಂಡುಕೊಂಡರು. ಕಾರಿನೊಳಗೆ ಆತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಗೇಟಿಗೊಳಗಾದ ಹೆರ್ನಾಂಡೆಜ್ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಈಗ ಕಾರಿಲ್ಲದ ಕಾರಣ ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.ಸ್ಥಳೀಯರು ಹೆರ್ನಾಂಡೆಜ್ ಬಗ್ಗೆ ತಿಳಿದಾಗ, ಅವರು ಬದಲಿ ಕಾರನ್ನು ಖರೀದಿಸಲು ಸಹಾಯ ಮಾಡಲು GoFundMe ನಲ್ಲಿ ಆನ್‌ಲೈನ್ ನಿಧಿಸಂಗ್ರಹವನ್ನು ಸ್ಥಾಪಿಸಿದ್ದಾರೆ. ಇದು ಆರಂಭದಲ್ಲಿ $5,000 ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಆದರೆ ಮಂಗಳವಾರ ಸಂಜೆ ವೇಳೆಗೆ, ಇದು ಸುಮಾರು ಆರು ಬಾರಿ ಗುರಿಯನ್ನು ಮೀರಿ $28,000 ಸಂಗ್ರಹಿಸಿದೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ