ದಿನದ ಒತ್ತಡದಿಂದ ಹೊರಬರಲು ನಿಮಗೆ ಸಹಾಯ ಮಾಡಲು ನೀವು ಕೆಲವು ಮುದ್ದಾದ ವೀಡಿಯೊಗಳನ್ನು ಹುಡುಕುತ್ತಿರುವಿರಾ? ಇಂಥದ್ದೇ ಅದ್ಭುತ ಹಾಗೂ ಮಾನವೀಯ ಕಾಳಜಿಯ ವೀಡಿಯೊವೊಂದನ್ನು ಫ್ರೆಡ್ ಷುಲ್ಟ್ಜ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ, ವೀಡಿಯೊವು ವಿಶೇಷ ಸಾಮರ್ಥ್ಯವುಳ್ಳ (ಅಂಗವೈಕಲ್ಯದ) ನಾಯಿಮರಿಗಳ ಗುಂಪು ತಮ್ಮ ವಿಶಿಷ್ಟ ಗಾಲಿಕುರ್ಚಿಗಳಲ್ಲಿ ಅರಣ್ಯ ಪ್ರದೇಶದಲ್ಲಿ ಓಡಾಡುವುದನ್ನು ತೋರಿಸುತ್ತದೆ.
ಅಮೆರಿಕದ ವರ್ಮೊಂಟ್ನಿಂದ ಟ್ರೇಸಿ ಫೌಲರ್ ದತ್ತು ಪಡೆದ ಹಲವಾರು ನಾಯಿಗಳನ್ನು ವೀಡಿಯೊ ಒಳಗೊಂಡಿದೆ. ಫೌಲರ್ ಹರ್ಡ್ ಎಂದು ಕರೆಯಲ್ಪಡುವ ಟ್ರೇಸಿಯ ಫ್ಯೂರಿ ಕುಟುಂಬವು ಈಗ ನಾಯಿಗಳ ಎಂಟು ಸದಸ್ಯರನ್ನು ಒಳಗೊಂಡಿದೆ. ತನ್ನ ಪ್ರೀತಿಯ ಸಾಕುನಾಯಿ ತೀರಿಕೊಂಡ ನಂತರ ವಿಶೇಷ ಅಗತ್ಯವುಳ್ಳ ನಾಯಿಗಳನ್ನು ರಕ್ಷಿಸಲು ಪ್ರಾರಂಭಿಸಿದ್ದಾರೆ.
ವೀಡಿಯೋದಲ್ಲಿ, ನಾಯಿಗಳು ತಮ್ಮ ದೇಹಕ್ಕೆ ಗಾಲಿಕುರ್ಚಿಗಳನ್ನು ಹಾಕಿಕೊಂಡು ಸಂತೋಷದಿಂದ ಓಡುತ್ತಿರುವುದನ್ನು ಕಾಣಬಹುದು. ಅನೇಕ ನಾಯಿಗಳು ಪಾರ್ಶ್ವವಾಯು ಅಥವಾ ಕಾಲುಗಳು ಸರಿಯಾಗಿಲ್ಲದೆ ಬಳಲುತ್ತಿರುವುದನ್ನು ಕಾಣಬಹುದು. ಆದರೆ ಗಾಲಿಕುರ್ಚಿಗಳಿಂದಾಗಿ ನಾಯಿಗಳು ಖುಷಿಯಿಂದ ಇತರ ನಾಯಿಗಳಂತೆ ಓಡಾಡುವುದನ್ನು ವೀಡಿಯೊದಲ್ಲಿ ನೋಡಬಹುದು.
ನಾಯಿಮರಿಗಳಿಗೆ ಉತ್ತಮ ಜೀವನವನ್ನು ನೀಡಿದ್ದಕ್ಕಾಗಿ ಕೆಲವರು ಟ್ರೇಸಿಯನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಭವಿಷ್ಯದಲ್ಲಿ ಅಂತಹ ನಾಯಿಗಳನ್ನು ರಕ್ಷಿಸಲು ಸಹಾಯ ಮಾಡಲು ಟ್ರೇಸಿ ಬಳಿ ವಿವರಗಳನ್ನು ಕೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ