ಪರೀಕ್ಷೆ ಬರೆದವರ ಬಗ್ಗೆ ಮಾತ್ರ ಯೋಚಿಸೋಣ: ಶಿಕ್ಷಣ ಸಚಿವ ನಾಗೇಶ

posted in: ರಾಜ್ಯ | 0

ಬೆಂಗಳೂರು: ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದು ಅವಕಾಶ ನಿರಾಕರಣೆ ನಂತರ ದ್ವಿತೀಯ ಪಿಯು ಪರೀಕ್ಷೆ ಬರೆಯದೇ ವಾಪಸ್‌ ವಿದ್ಯಾರ್ಥಿನಿಯರಿಬ್ಬರ ವರ್ತನೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ನಾವು ಪರೀಕ್ಷೆ ಬರೆದವರ ಬಗ್ಗೆಯಷ್ಟೇ ಯೋಚಿಸಬೇಕು. ಬರೆಯದವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಸಹ ಹೇಳಿದ್ದಾರೆ.

ಕೆಲಮಾಧ್ಯಮದವರ ಜೊತೆ ಮಾತನಾಡಿದ ಅವರು, ಪರೀಕ್ಷೆ ಮತ್ತು ಶೈಕ್ಷಣಿಕ ಭವಿಷ್ಯದ ಪ್ರಾಮುಖ್ಯತೆ ಅರ್ಥ ಮಾಡಿಸುವಲ್ಲಿ ಆರಂಭದಿಂದಲೂ ಪ್ರಯತ್ನ ಮಾಡಲಾಗಿತ್ತು. ಪರೀಕ್ಷಾ ದಿನದಂದು ಕೂಡಾ ಒಂದು ಗಂಟೆಗೂ ಹೆಚ್ಚು ಕಾಲ ಇಬ್ಬರು ವಿದ್ಯಾರ್ಥಿನಿಯರ ಮನವೊಲಿಕೆಗೆ ಪ್ರಯತ್ನಿಸಲಾಗಿದೆ ಆದರೆ ಅವರು ಬೇರೆ ಕೆಲಸಂಘಟನೆಗಳು ಹೇಳಿದ್ದನ್ನೇ ಕೇಳಿದ್ದಾರೆ ಎಂದು  ಶಿಕ್ಷಣ ಸಚಿವರು ಹೇಳಿದರು.
ಪಿಎಫ್‌ಐ, ಸಿಎಫ್‌ಐ ಸಂಘಟನೆಗಳಿಂದ ಅವರ ಭವಿಷ್ಯ ಹಾಳಾಗುತ್ತಿದೆ. ಪರೀಕ್ಷೆ ಬರೆದವರ ಬಗ್ಗೆಯಷ್ಟೇ ಯೋಚಿಸಬೇಕು. ಈ ಆರು ಮಂದಿಯ ಬಗೆಗೆ ಯೋಚಿಸುವುದನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
advertisement

ನಿಮ್ಮ ಕಾಮೆಂಟ್ ಬರೆಯಿರಿ