ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಬ್ಬೀ ಸಮುದ್ರದ ಕರಾವಳಿಯ ಕಡ್ಲೆ ತೀರದಲ್ಲಿ ಡಾಲ್ಫಿನ್ ಕಳೆಬರಹ ಪತ್ತೆಯಾಗಿದೆ .
ಸ್ಥಳೀಯವಾಗಿ ಇದಕ್ಕೆ ಹಂದಿ ಮೀನು ಎಂದು ಕರೆಯಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ೩೦ ನಾಟಿಕಲ್ ಮೈಲು ಒಳಗೆ ಇದರ ವಾಸಸ್ಥಾನ ಎಂದು ಹೇಳಲಾಗಿದೆ. ಅರಣ್ಯಾಧಿಕಾರಿಗಳು ಹೇಳುವಂತೆ ಮೀನುಗಾರಿಕಾ ಬೋಟ್‌ಗಳ ಫೋನ್‌ಗಳು ಬೋಟಿಗೆ ತಾಗಿ ಪೆಟ್ಟಾಗಿ ಸಾಯುವ ಸಂಭವವಿರುತ್ತದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಡಾಲ್ಫಿನ್ ಮೀನು 3 ಮೀಟರ್ ಉದ್ದ ಮತ್ತು 150 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ. ಸಮುದ್ರದಲ್ಲಿ ವಾಯುಭಾರ ಕುಸಿತ ಅಥವಾ ಬಿರುಗಾಳಿಯಿಂದ ಜಲಚರಗಳಿಗೆ ತೊಂದರೆಯಾಗುವುದು ಸಾಮಾನ್ಯ. ಆದರೆ ಇದ್ಯಾವುದೂ ಇಲ್ಲದ ಈಗ ಡಾಲ್ಫಿನ್ ಸತ್ತಿದ್ದು ಹೇಗೆ ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಮೀನುಗಾರರು ಡಾಲ್ಫನ್ ಮೀನನ್ನು ಹಿಡಿಯುವುದಿಲ್ಲ. ಯಾರೂ ಇದನ್ನು ತಿನ್ನುವುದಿಲ್ಲ. ಮೀನುಗಾರರು ಹೇಳುವ ಪ್ರಕಾರ ಇದು ದೇವರ ಮೀನು. ಒಂದೊಮ್ಮೆ ಬಲೆಯಲ್ಲಿ ಬಿದ್ದರೂ ಅವರು ಅದಕ್ಕೆ ಹಾನಿ ಮಾಡದೆ ಸುರಕ್ಷಿತವಾಗಿ ಸಮುದ್ರದಲ್ಲಿ ಬಿಡುತ್ತಾರಂತೆ.
ಕಳೆದ ವರ್ಷ ಹೊಲನಗದ್ದೆ ಅರಬ್ಬಿ ತೀರದಲ್ಲಿ ೩ ತಿಂಗಳ ಅವಧಿಯಲ್ಲಿ ೧೦ ಕ್ಕೂ ಹೆಚ್ಚು ಡಾಲ್ಫಿನ್ ಗಳು ಮರಣ ಹೊಂದಿದ್ದವು. ಆಗಿನ ವಲಯ ಅರಣ್ಯ ಅಧಿಕಾರಿ ವಿನಯ ನಾಯಕ ಅವರು ಪ್ರಾಣಿ ತಜ್ಞರನ್ನು ಸಂಪರ್ಕಿಸಿ ಡಾಲ್ಫಿನ್ ಮರಣಕ್ಕೆ ಕಾರಣ ತಿಳಿಯಲು ಪ್ರಯತ್ನಿಸಿದ್ದರು. ಆದರೆ ಸರಕಾರಿ ಪ್ರಯೋಗಾಲಯದಿಂದ ಇನ್ನೂ ತನಕ ಯಾವುದೇ ವರದಿ ಬಂದಿಲ್ಲ ಎನ್ನಲಾಗಿದೆ.
ಈ ವರ್ಷ ಮತ್ತೆ ಡಾಲ್ಫಿನ್ ಅರಬ್ಬಿ ತೀರದಲ್ಲಿ ಸಾಯುತ್ತಿದೆ. ಡಾಲ್ಫಿನ್ ಈ ತರಹ ಸಾಯುತ್ತಿರುವುದಕ್ಕೆ ಸೂಕ್ತ ಕಾರಣ ಕಂಡುಹಿಡಿಯುವುದು ಅಗತ್ಯವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ