ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪೂರ ತಾಲೂಕಿನ ಹೆಗ್ಗರಣಿ ಸಮೀಪದ ಹಳೇಹಳ್ಳದ ಬಳಿ ಕಾಳಿಂಗ ಸರ್ಪವೊಂದು ಮರಿ ಹಬ್ಬಾವನ್ನು ನುಂಗಲು ಪ್ರಯತ್ನಿಸುತ್ತಿದ್ದ ವೀಡಿಯೋ ವೈರಲ್ ಆಗಿದೆ.
ನಾರಾಯಣ ಹೆಗಡೆ ಎಂಬವರ ದನದ ಕೊಟ್ಟಿಗೆ ಸಮೀಪದ ಗೊಬ್ಬರ ಗುಂಡಿ ಬಳಿ ಬಂದಿದ್ದ ಕಾಳಿಂಗ ಸರ್ಪ ಹೆಬ್ಬಾವಿನ ಮರಿಯನ್ನು ನುಂಗಲು ಪ್ರಯತ್ನಿಸಿದೆ ಎಂದು ವರದಿಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಕೆಲಸ ಮಾಡುತ್ತಿದ್ದಾಗ ಮನೆಯ ಕೆಲಸಗಾರನಿಗೆ ಕಾಳಿಂಗ ಸರ್ಪ ಮೊದಲು ಕಂಡಿದೆ. ಈ ಬಗ್ಗೆ ಆತಮ ಮಾಹಿತಿ ನೀಡಿದ ನಂತರ ಸುತ್ತ ಮುತ್ತಲಿನವರು ಆಗಮಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸಹ ಘಟನಾ ಸ್ಥಳಕ್ಕೆ ಆಗಮಿಸಿದರು. ಅಲ್ಲದೆ, ಉರಗ ತಜ್ಞ ಕುಮಟಾದ ಪವನ ನಾಯ್ಕ ಸಂಜೆ ವೇಳೆಗೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಲು ಪ್ರಯತ್ನಿಸಿದೆ. ಆದರೆ ಅದಕ್ಕೆ ಪೂರ್ಣ ನುಂಗಲು ಸಾಧ್ಯವಾಗದೆ ಅದನ್ನು ಹೊರಹಾಕಿದೆ ಎಂದು ವರದಿಗಳು ತಿಳಿಸಿವೆ. ಈ ವೀಡಿಯೊ ಈಗ ಭಾರೀ ವೈರಲ್ ಆಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ