ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋದಾಗ ಗಂಗಾವಳಿ ನದಿಯಲ್ಲಿ ಮುಳುಗಿ ಹುಡುಗಿ ಸೇರಿ ಮೂವರು ಸಂಬಂಧಿಗಳು ಸಾವು

posted in: ರಾಜ್ಯ | 0

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋಗಿ ನೀರು ಪಾಲಾದ ಸಂಬಂಧಿಕರು-ಹುಡುಗಿ ಸೇರಿ ಮೂವರ ಸಾವು

ಅಂಕೋಲಾ: ರಜಾ ದಿನದ ಮೋಜಿಗೆಂದು ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು
ಕಾಲು ಜಾರಿ ಬಿದ್ದು ನೀರಿನಲ್ಲಿ ಬಿದ್ದು ಮುಳುಗಿ ಮೃತ ಪಟ್ಟ ಘಟನೆ ಹಿಲ್ಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಕಲ್ ಕಡಕಾರ್ ಬಳಿ ಸಂಭವಿಸಿದೆ.
ಗಂಗಾವಳಿ ನದಿಯಲ್ಲಿ ಕೊಂಡಗ (ಚಿಪ್ಪೆಕಲ್ಲು ಮಾದರಿಯ ಜಲಚರ) ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಮೃತಪಟ್ಟ ಇವರು ಮೂವರು ಸೋದರ ಸಂಬಂಧಿಗಳು ಎಂದು ಹೇಳಲಾಗಿದೆ.

ಕರಿಕಲ್‌ನ ಪೂಜಾ ಮಹೇಶ ನಾಯ್ಕ (17), ಕುಮಟಾ ತಾಲೂಕಿನವರಾದ ಕೋನಳ್ಳಿಯ ದಿಲೀಪ್  ನಾಯ್ಕ (20) ಹಾಗೂ ಅಘನಾಶಿನಿಯ ನಾಗೇಂದ್ರ  ನಾಯ್ಕ (16) ಮತ್ತು ಮೃತರು ಎಂದು ಗುರುತಿಸಲಾಗಿದೆ.
ಪೂಜಾ, ಕುಮಟಾದ ನೆಲ್ಲಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗಷ್ಟೇ ಪ್ರಥಮ ಪಿ.ಯು.ಸಿ ಅಧ್ಯಯನ ಮುಗಿಸಿದ್ದಾಳೆ ಎಂದು ಹೇಳಲಾಗಿದೆ. ಕೋನಳ್ಳಿಯ ದಿಲೀಪ್ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದು, ಬೇಸಿಗೆ ರಜೆಯ ನಿಮಿತ್ತ ಮನೆಗೆ ಬಂದಿದ್ದಳು.

ಓದಿರಿ :-   ನಾಳೆ ಸಚಿವಾಲಯ ಬಂದ್‌ಗೆ ಕರೆ ನೀಡಿದ ನೌಕರರು; ಪ್ರತಿಭಟನೆ ಕಾನೂನುಬಾಹಿರ ಎಂದ ಸರ್ಕಾರ

ಭಾನುವಾರ ಬೆಳಿಗ್ಗೆ ಪೂಜಾಳ ಮನೆಗೆ ಬಂದಿದ್ದ ಮಾವನ ಮಗ ನಾಗೇಂದ್ರ ಮತ್ತು ದೊಡ್ಡಮ್ಮನ ಮಗ ದಿಲೀಪ್ ಜೊತೆಗೂಡಿ ಸಮೀಪದ ಗಂಗಾವಳಿ ನದಿಯಲ್ಲಿ ಕೊಂಡಗ ಆರಿಸಲು ಮಧ್ಯಾಹ್ನ ಹೋಗಿದ್ದಾರೆ. ಆ ವೇಳೆ ಪೂಜಾ ಕಾಲು ಜಾರಿ ಬಿದ್ದಿದ್ದು, ಅವಳನ್ನು ಕಾಪಾಡಲು ಹೋದ ಉಳಿದ ಇಬ್ಬರೂ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕೋನಳ್ಳಿ ಗ್ರಾಮದ ದಿಲೀಪ್ ನಾಯ್ಕ ಕುಮಟಾ ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎ ಮೂರನೇ ಸೆಮಿಸ್ಟರ್ ಓದುತ್ತಿದ್ದಾನೆ ಎನ್ನಲಾಗಿದೆ ಹಾಗೂ

ಮೂವರ ಮೃತದೇಹಗಳು ದೊರಕಿವೆ. ಅಂಕೋಲಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ