ಬುಲೆಟ್ ದೇಹ ಹೊಕ್ಕುವುದನ್ನು ತಡೆದು ಉಕ್ರೇನಿಯನ್ ಸೈನಿಕನ ಜೀವ ಉಳಿಸಿದ ಮೊಬೈಲ್‌ ಫೋನ್‌ | ವೀಕ್ಷಿಸಿ

ಉಕ್ರೇನ್‌ ಯುದ್ಧಭೂಮಿಯಲ್ಲಿ ಯೋಧನೊಬ್ಬ ತನ್ನ ಸ್ಮಾರ್ಟ್‌ಫೋನ್‌ನಿಂದಾಗಿ ಗುಂಡು ತಗಲುವುದರಿಂದ ಪಾರಾದ ಘಟನೆ ವರದಿಯಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎರಡನೇ ತಿಂಗಳಿಗೆ ಕಾಲಿಟ್ಟಿರುವ ರಷ್ಯಾ-ಉಕ್ರೇನ್ ಯುದ್ಧದ ವೀಡಿಯೊ ಎಂದು ಹೇಳಲಾಗಿದೆ. 30 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ಉಕ್ರೇನಿಯನ್ ಸೈನಿಕನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ, ಅಲ್ಲಿ ಆತ ಸ್ಮಾರ್ಟ್‌ಫೋನ್ ತನ್ನ ಜೀವವನ್ನು ಉಳಿಸಿದೆ ಎಂದು ಹೇಳುತ್ತಿದ್ದಾನೆ.

ವೀಡಿಯೊ ನಂತರ ಆ ಸೈನಿಕ ತನ್ನ ಸ್ಮಾರ್ಟ್‌ ಫೋನ್‌ ತೆಗೆದು ತೋರಿಸುತ್ತಾನೆ ಹಾಗೂ ಅದರೊಳಗೆ 7.62 ಎಂಎಂ ಬುಲೆಟ್ ಅಂಟಿಕೊಂಡಿರುತ್ತದೆ. ಸ್ಮಾರ್ಟ್‌ಫೋನ್ ಇಲ್ಲದೆ ಹೋದರೆ ಬುಲೆಟ್‌ ಉಕ್ರೇನ್‌ ಸೈನಿಕನನ್ನು ಕೊಲ್ಲುತ್ತಿತ್ತು.
ವೀಡಿಯೊದಲ್ಲಿ ಗುಂಡಿನ ಸದ್ದು ಸ್ಪಷ್ಟವಾಗಿ ಕೇಳಿಬರುತ್ತಿದ್ದು, ಹೀಗಾಗಿ ಇದು ಯುದ್ಧಭೂಮಿಯದ್ದು ಎಂದು ತೋರಿಸುತ್ತದೆ.ಆದಾಗ್ಯೂ, ವೀಡಿಯೊದ ಮೂಲದ ಬಗ್ಗೆ ನೂರಕ್ಕೆ ನೂರು ದೃಢತೆಯಿಲ್ಲ.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಎರಡನೇ ತಿಂಗಳಿಗೆ ಪ್ರವೇಶಿಸುತ್ತಿದ್ದಂತೆ, ಮಾಸ್ಕೋ ಪೂರ್ವ ಉಕ್ರೇನ್‌ನಲ್ಲಿ ತನ್ನ ದಾಳಿಯ ತೀವ್ರತೆ ಹೆಚ್ಚಿಸಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಏಪ್ರಿಲ್ 21 ರಂದು, ಆಯಕಟ್ಟಿನ ಬಂದರು ನಗರ ಮಾರಿಯುಪೋಲ್ ಅನ್ನು ‘ಯಶಸ್ವಿಯಾಗಿ ವಿಮೋಚನೆಗೊಳಿಸಲಾಗಿದೆ’ ಎಂದು ಘೋಷಿಸಿದರು. ಪ್ರಸ್ತುತ, ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ದೈನಂದಿನ ಬಾಂಬ್ ದಾಳಿಗಳನ್ನು ದಾಖಲಿಸಲಾಗುತ್ತಿದೆ, ಉಕ್ರೇನ್‌ ಹಾಗೂ ರಷ್ಯಾ ಎರಡೂ ಕಡೆಯವರು ಪ್ರದೇಶದ ನಿಯಂತ್ರಣಕ್ಕಾಗಿ ತೀವ್ರವಾಗಿ ಹೋರಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಒಂದೇ ದಿನ ಸ್ವತಂತ್ರವಾದೆವು ; ನಾವೀಗ ಭಿಕ್ಷೆ ಬೇಡುತ್ತಿದ್ದೇವೆ...ಆದರೆ ಭಾರತ...: ಪಾಕಿಸ್ತಾನ ನಾಯಕನ ಹೇಳಿಕೆ ವೈರಲ್‌...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement