ನವದೆಹಲಿ: ಆರ್‌ಜೆಡಿ ನಾಯಕ ಮತ್ತು ಲಾಲು ಪ್ರಸಾದ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ರಾಜೀನಾಮೆ ನೀಡುವುದಾಗಿ ಸೋಮವಾರ ಹೇಳಿದ್ದಾರೆ.
ತೇಜ್ ಪ್ರತಾಪ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಥಳಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಆರೋಪಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ತಂದೆಯವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವುದಾಗಿ ತೇಜ್ ಪ್ರತಾಪ್ ಅವರು ತಿಳಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ, ಅವರು, “ನಾನು ನನ್ನ ತಂದೆಯ ಹಾದಿಯನ್ನು ಅನುಸರಿಸಿದ್ದೇನೆ. ಎಲ್ಲಾ ಕಾರ್ಯಕರ್ತರಿಗೆ ಗೌರವವನ್ನು ನೀಡಿದ್ದೇನೆ, ನನ್ನ ತಂದೆಯನ್ನು ಭೇಟಿಯಾದ ನಂತರ ಶೀಘ್ರದಲ್ಲೇ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಆರ್‌ಜೆಡಿಯ ಪಾಟ್ನಾ ಮೆಟ್ರೋಪಾಲಿಟನ್ ಯುವ ಅಧ್ಯಕ್ಷ ರಾಮರಾಜ್ ಯಾದವ್ ಅವರು, ರಾಬ್ರಿ ದೇವಿ ಅವರ ನಿವಾಸದ ಕೊಠಡಿಯಲ್ಲಿ ಇಫ್ತಾರ್ ಕೂಟದಲ್ಲಿ ವ್ಯವಸ್ಥೆಯನ್ನು ನಾನು ನೋಡಿಕೊಳ್ಳುತ್ತಿದ್ದೆ. ಆಗ ತೇಜ್ ಪ್ರತಾಪ್ ಯಾದವ್ ಅವರು ತಮ್ಮನ್ನು ಥಳಿಸಿದ್ದಾರೆ ಎಂದು ಮೊನ್ನೆಯಷ್ಟೇ ಆರೋಪಿಸಿದ್ದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ತೇಜ್ ಪ್ರತಾಪ್ ಯಾದವ್ ಮತ್ತು ನಾಲ್ಕೈದು ಮಂದಿ ಏಕಾಏಕಿ ಬಂದು ತಮ್ಮೊಂದಿಗೆ ಬರುವಂತೆ ಹೇಳಿದರು. ಅವರು ನನ್ನನ್ನು ಒಂದು ಕೋಣೆಯಲ್ಲಿ ಬಂಧಿಸಿ ನನ್ನನ್ನು ಥಳಿಸಲು ಪ್ರಾರಂಭಿಸಿದರು. ಅವರ ಸಹಚರರೊಬ್ಬರು ಇದನ್ನು ಚಿತ್ರೀಕರಿಸುತ್ತಿದ್ದರು ಎಂದು ಆರ್‌ಜೆಡಿ ನಾಯಕ ಆರೋಪಿಸಿದ್ದರು.
ಅವರು ಜಗದಾನಂದ್ ಸಿಂಗ್ ಮತ್ತು ಲಾಲು ಯಾದವ್ ಅವರ ಬಗ್ಗೆಯೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ರಾಮರಾಜ್ ಹೇಳಿದ್ದಾರೆ. ರಾಜೀನಾಮೆ ಸಲ್ಲಿಸಲು ಹೋದಾಗ ಆರ್‌ಜೆಡಿ ಕಚೇರಿಯ ಹೊರಗೆ ನಾನು ಅಳುತ್ತಿದ್ದೆ, ಆದರೆ ಯಾರೂ ನನ್ನ ಬಳಿಗೆ ಬರಲಿಲ್ಲ ಎಂದು ಹೇಳಿದ್ದರು. ಅದೇ ಇಫ್ತಾರ್ ಕೂಟದಲ್ಲಿ ರಾಮರಾಜ್ ಯಾದವ್ ಹೊರತುಪಡಿಸಿ ಮತ್ತೊಬ್ಬ ಆರ್‌ಜೆಡಿ ನಾಯಕನ ಮೇಲೂ ಹಲ್ಲೆ ನಡೆದಿದೆ ಎಂದು ವರದಿಗಳು ಸೂಚಿಸುತ್ತವೆ.
ನಿಮ್ಮ ಕಾಮೆಂಟ್ ಬರೆಯಿರಿ