ಕರಾಚಿ ವಿವಿ ಸ್ಫೋಟದಲ್ಲಿ ನಾಲ್ವರು ಸಾವು: ತನ್ನನ್ನೇ ತಾನು ಸ್ಫೋಟಿಸಿಕೊಂಡ ಮಹಿಳಾ ಆತ್ಮಹತ್ಯಾ ಬಾಂಬರ್…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳವಾರ ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಾಹನದ ಮೇಲೆ ನಡೆದ ಶಂಕಿತ ಆತ್ಮಾಹುತಿ ದಾಳಿಯಲ್ಲಿ ಮೂವರು ಚೀನಾದ ನಾಗರಿಕರು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಮಹಿಳಾ ಆತ್ಮಹತ್ಯಾ ಬಾಂಬರ್‌ನಿಂದ ಈ ದಾಳಿ ನಡೆದಿದೆ ಎಂದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ತಿಳಿಸಿದೆ.

ಮಹಿಳೆಯೊಬ್ಬರು ಕಾರಿನ ಬಳಿ ಬಾಂಬ್ ಸ್ಫೋಟಿಸಿದ್ದಾರೆ ಎಂದು ಹೇಳುವ ಮೂಲಕ ಜಿಯೋ ಟೆಲಿವಿಷನ್ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪ್ರಸಾರ ಮಾಡಿದೆ. ದಾಳಿಯ ಹಿಂದೆ ಆತ್ಮಹತ್ಯಾ ಬಾಂಬರ್‌ನ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮನ್ ಹೇಳಿದ್ದಾರೆ.

ಮಹಿಳೆಯ ಬುರ್ಖಾವನ್ನು ಧರಿಸಿರುವ ವ್ಯಕ್ತಿಯೊಬ್ಬರು ವಿಶ್ವ ವಿದ್ಯಾಲಯಕ್ಕೆ ವ್ಯಾನ್‌ ಪ್ರವೇಶುವ ದಾರಿಯಲ್ಲಿ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ವ್ಯಾನ್‌ ಹತ್ತಿರ ಬಂದ ನಂತರಸ್ಫೋಟ ಸಂಭವಿಸಿದೆ.
ದಾಳಿಯ ನಂತರದ BLA ಹೇಳಿಕೆಯು ಬಾಂಬರ್ ಅನ್ನು ಶಾರಿ ಬಲೋಚ್ ಅಥವಾ ಬ್ರಾಮ್ಶ್ ಎಂದು ಗುರುತಿಸಿದೆ, ಆಕೆ ಗುಂಪಿನ ಮೊದಲ ಮಹಿಳಾ ಬಾಂಬರ್ ಎಂದು ಬಿಎಲ್‌ ಎ ಹೇಳಿಕೊಂಡಿದೆ. ಈ ದಾಳಿಯು “ಬಲೂಚ್ ಪ್ರತಿರೋಧದ ಇತಿಹಾಸದಲ್ಲಿ ಹೊಸ ಅಧ್ಯಾಯ” ಎಂದು ಅದು ಹೇಳಿದೆ.
ಜುಲೈ 2021 ರಲ್ಲಿ ವಾಯುವ್ಯದಲ್ಲಿರುವ ದಾಸು ಎಂಬಲ್ಲಿ ಬಸ್‌ನ ಮೇಲೆ ಬಾಂಬ್ ಸ್ಫೋಟಿಸಿ ಒಂಬತ್ತು ಚೀನೀ ಪ್ರಜೆಗಳನ್ನು ಕೊಂದ ನಂತರ ಪಾಕಿಸ್ತಾನದಲ್ಲಿ ಚೀನಾದ ಪ್ರಜೆಗಳ ಮೇಲೆ ಇದು ಮೊದಲ ದೊಡ್ಡ ದಾಳಿಯಾಗಿದೆ. ಆದರೆ, ಆ ದಾಳಿಯನ್ನು ಬಲೂಚ್ ಉಗ್ರಗಾಮಿಗಳು ಹೇಳಿಕೊಂಡಿರಲಿಲ್ಲ. ಪಾಕಿಸ್ತಾನಿ ತಾಲಿಬಾನ್ – ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದೂ ಕರೆಯಲ್ಪಡುವ – ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿಗಳೂ ಸಾವಿಗೀಡಾಗಿದ್ದಾರೆ.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ