ವಿಜಯಪುರ : ಜಿಲ್ಲೆಯ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಮೊದಲ ಹಂತ ಉದ್ಘಾಟನೆ ಹಾಗೂ ಎರಡನೇ ಹಂತದ ಯೋಜನೆ ಕಾಮಗಾರಿಗೆ ಚಾಲನೆಗೆ ಮುನ್ನ ಎತ್ತು, ಗೋವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು.
advertisement
9535127775 / 9901837775 / 6364528715 / 08362775155 / https://icsmpucollege.com/
ಎತ್ತುಗಳಿಗೆ ಪೂಜೆ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂಜೆ ಮುಗಿದ ನಂತರ ಎತ್ತಿನ ಮೈ ಸವರಲು ಮುಂದಾಗಿದ್ದಾರೆ. ಜನಜಂಗುಳಿಯಲ್ಲಿ ಸಂದರ್ಭದಲ್ಲಿ ಹೊರಗೆ ಗದ್ದಲ ಹೆಚ್ಚಾಗುತ್ತಿದ್ದಂತೆ ಬೆದರಿದಂತ ಎತ್ತು ಒಮ್ಮೆಗೇ ತಲೆಯಾಡಿಸುತ್ತ ಮುನ್ನುಗ್ಗಿದೆ.
ತಕ್ಷಣವೇ ಬೊಮ್ಮಾಯಿಯವರು ಪಕ್ಕೆ ಸರಿದಿದ್ದಾರೆ. ಆಗ ಅಲ್ಲಿಯೇ ಇದ್ದ ಎಎಸ್ಪಿ ಎತ್ತಿನ ಕೊಂಬನ್ನು ಹಿಡಿದಿದ್ದಾರೆ. ಸ್ಥಳದಲ್ಲಿ ಇದ್ದ ರೈತರು ಕೂಡಲೇ ಎತ್ತನ್ನು ಬಿಗಿಯಾಗಿ ಹಿಡಿದಿದ್ದರಿಂದ ಸಂಭವನೀಯ ಅಪಾಯ ತಪ್ಪಿದೆ.
ನಿಮ್ಮ ಕಾಮೆಂಟ್ ಬರೆಯಿರಿ