ವಿಭೂತಿ ಇಟ್ಟುಕೊಂಡಿದ್ದಕ್ಕೆ ವಿದ್ಯಾರ್ಥಿನಿಗೆ ಕತ್ತೆ ಎಂದು ಅವಹೇಳನ ಮಾಡಿದ ಶಿಕ್ಷಕಿ, ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರ ವಿರುದ್ಧ ಕ್ರೈಸ್ತ ಧರ್ಮ ಪ್ರಚಾರದ ಆರೋಪ

ತಿರುಪ್ಪೂರ್‌: ತಮಿಳುನಾಡಿನ ತಿರುಪ್ಪೂರ್‌ನ ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಧಾರ್ಮಿಕ ಗುರುತಿನ ಮೇಲೆ ಇಬ್ಬರು ಶಿಕ್ಷಕರು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
ತಾನು ವಿಭೂತಿ ಇಟ್ಟುಕೊಂಡಿದ್ದಕ್ಕೆ ಶಿಕ್ಷಕಿ ತನಗೆ ಕತ್ತೆ ಎಂದು ಕರೆದಿದ್ದಾರೆ, ಒಮ್ಮೆ ಅವಳು ನೀರಿನಲ್ಲಿ ಕೈಯಿಟ್ಟು ಯೇಸುವಿನ ಬಗ್ಗೆ ಹೇಳಿದರು. ನಂತರ, ತನ್ನ ಕೈಯಲ್ಲಿ ನೀರಿನಿಂದ ಹೊರ ತೆಗೆದು ಹಿಂದೂ ಹುಡುಗಿಯರ ಹೊಟ್ಟೆಯನ್ನು ಮೂರು ಬಾರಿ ಮುಟ್ಟಿದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ಇಂಡಿಯಾ ಟುಡೆ.ಇನ್‌ ವರದಿ ಮಾಡಿದೆ.

ವರದಿ ಪ್ರಕಾರ, ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪ್ರಾರ್ಥನೆ ಮಾಡುವಂತೆ ಹೇಳುತ್ತಾರೆ ಎಂದು ಮಗು ಆರೋಪಿಸಿದೆ. “ಒಂದು ದಿನ ಅವರು ತರಗತಿ ತೆಗೆದುಕೊಳ್ಳುತ್ತಿದ್ದಾಗ, ತಮ್ಮ ಪ್ರಾಣವನ್ನು ಕೊಟ್ಟು ನಮ್ಮನ್ನು ರಕ್ಷಿಸಿದವರು ಯಾರು ಎಂದು ಕೇಳಿದ್ದಾರೆ. ನಾವು ಬೇರೆ ಬೇರೆ ಹೆಸರುಗಳನ್ನು ಹೇಳಿದ್ದೇವೆ, ಆದರೆ ನೀವು ಯೇಸು ಎಂದು ಏಕೆ ಹೇಳಲಿಲ್ಲ ಎಂದು ಅವರು ನಮ್ಮನ್ನು ಕೇಳಿದ್ದಾರೆ ಎಂದು ವಿದಾರ್ಥಿನಿ ಹೇಳಿದ್ದಾಳೆ.
ಒಬ್ಬ ಶಿಕ್ಷಕಿ ದೇವರಲ್ಲಿ ಬಲಶಾಲಿ ಯಾರು ಎಂದು ಕೇಳಿದಾಗ ತಾನು ಶಿವ ಎಂದು ಉತ್ತರಿಸಿದ್ದಕ್ಕೆ ಎಂದು ಶಿಕ್ಷಕಿ ಅದನ್ನು ಅಲ್ಲಗೆಳೆದು ಜೀಸಸ್ ದೇವರುಗಳಲ್ಲಿ ಬಲಶಾಲಿ ಎಂದು ಹೇಳಿದರು ಎಂದು ತಿಳಿಸಿದ್ದಾಳೆ.
ನಂತರ ಬಾಲಕಿ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ, ಅವರು ನಮ್ಮನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಈ ವಿಷಯದಲ್ಲಿ ನಾನು ಏನು ಕ್ರಮ ತೆಗೆದುಕೊಳ್ಳಬೇಕೆಂದು ಬರೆಯಲು ಕೇಳಿದರು. ನಾನು ಹಾಗೆ ಮಾಡಿದ್ದೇನೆ ಮತ್ತು ಈಗ ಕ್ರಮಕ್ಕಾಗಿ ಕಾಯುತ್ತಿದ್ದೇನೆ” ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಕ್ರಮಕ್ಕೆ ಆಗ್ರಹ
ಬಿಜೆಪಿ ವಕ್ತಾರ ನಾರಾಯಣ ತ್ರಿಪಾಠಿ, ಆಡಳಿತಾರೂಢ ಡಿಎಂಕೆ ಸರ್ಕಾರ ಬಲವಂತದ ಮತಾಂತರದ ಘಟನೆಗಳಿಗೆ ಮೂಕಪ್ರೇಕ್ಷಕವಾಗಿದೆ ಎಂದು ಇಂಡಿಯಾ ಟುಡೇಗೆ ಜೊತೆ ಮಾತಡುವಾಗ ಹೇಳಿದ್ದಾರೆ.
ಪೊಲೀಸರು ಹಾಗೂ ಸರಕಾರ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಮತಾಂತರ ಅತ್ಯಂತ ಅಪಾಯಕಾರಿ ವಿಷಯ, ತಮಿಳುನಾಡಿನಲ್ಲಿ ತಕ್ಷಣದಿಂದಲೇ ಮತಾಂತರ ವಿರೋಧಿ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಕನ್ಯಾಕುಮಾರಿಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯೊಳಗೆ ಕ್ರೈಸ್ತ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಆರೋಪಿಸಿದ ನಂತರ ಅಮಾನತುಗೊಳಿಸಲಾಗಿತ್ತು. ಜನವರಿಯಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿ 12 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ವರದಿಯಾಗಿತ್ತು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement