ಮಲ್ಲಾಪುರದಲ್ಲಿ ಏಪ್ರಿಲ್‌ 30ರಂದು ಭಾವಗೀತೆ-ಭಕ್ತಿಗೀತೆಗಳ ಪ್ರಸ್ತುತಿ ಭಾವಧಾರಾ ಕಾರ್ಯಕ್ರಮ

ಕುಮಟಾ: ಕೂಜಳ್ಳಿಯ ಷಡಕ್ಷರಿ ಗವಾಯಿಗಳ ಅಕಾಡೆಮಿ ವತಿಯಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಭಾವಧಾರಾ ಏಪ್ರಿಲ್‌  30ರಂದು ಕೂಜಳ್ಳಿ ಸಮೀಪದ ಮಲ್ಲಾಪುರದ ಗುರುಮಠದಲ್ಲಿ ನಡೆಯಲಿದೆ. ಏಪ್ರಿಲ್‌ 30ರಂದು ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ಅನೇಕ ಹಿರಿಯ-ಕಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಶ್ರೀಲತಾ ಗುರುರಾಜ ಆಡುಕಳ, ಗಣೇಶ ಭಟ್‌ ಕಡತೋಕ, ಅಶ್ವಿನಿ ಕುಮಟಾ, ಧನ್ಯಾ ಹೆಗಡೆ ಮೂಡ್ಕುಳಿ, ಸ್ವಾತಂತ್ರ್ಯ ನಾಯ್ಕ ಚಂದಾವರ, ಮಾರುತಿ ನಾಯ್ಕ ಕೂಜಳ್ಳಿ, ಜಿ.ಡಿ.ಹೇರಂಬ ಕೂಜಳ್ಳಿ, ಓಂಕಾರ ಭಟ್‌ ಮಲ್ಲಾಪುರ, ಕಾರ್ತಿಕ ಶುಕ್ಲ ಮಲ್ಲಾಪುರ, ವಿನಯ ಪೈ ಹೊನ್ನಾವರ, ರಾಘವ ಶೇಟ್‌ ಹೊನ್ನಾವರ, ಸಾತ್ವಿಕ ಶುಕ್ಲ ಮಲ್ಲಾಪುರ, ಗೌರಿ ಭಟ್‌ ಹಳದಿಪುರ, ತೇಜಾ ಭಟ್‌ ಕವಲಕ್ಕಿ, ಸುಮಾ ಭಟ್‌ ಕೋಡ್ಕಣಿ, ರಿಷಾ ನಾಯಕ ಕುಮಟಾ, ನೇಹಾ ಭಟ್‌ ಮೂಡ್ಕುಳಿ ಅವರು ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಇವರಿಗೆ ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ಬೆಣ್ಣೆಮನೆ ಹಾಗೂ ಪರಮೇಶ್ವರ ಹೆಗಡೆ ಅರೇಅಂಗಡಿ ಹಾಗೂ ಕೊಳಲಿನಲ್ಲಿ ಈಶ್ವರ ಶಾಸ್ತ್ರೀ ಬೋಳತಟ್ಟೆ, ಭಾರ್ಗವ ರಾವ್‌ ಬೆಂಗಳೂರು ಹಾಗೂ ಕಿಶೋರ ಹೆಗಡೆ ಮುಂಬೈ ಅವರು ಪಾಲ್ಗೊಳ್ಳಲಿದ್ದಾರೆ. ತಬಲಾದಲ್ಲಿ ಎನ್.ಜಿ.ಹೆಗಡೆ ಕಪ್ಪೆಕೆರೆ, ಅಕ್ಷಯ ಭಟ್‌ ಹಂಸಳ್ಳಿ, ಭರತ್‌ ಹೆಗಡೆ ಕವಲಕ್ಕಿ, ರಾಜೇಶ ಪ್ರಭು ಹರಿಟ್ಟಾ, ಗುರುಪ್ರಸಾದ ಭಟ್‌ ಮಲ್ಲಾಪುರ, ಮಹೇಶ ಹೆಗಡೆ ಹೊಸಗದ್ದೆ, ವಿನಾಯಕ ಭಟ್‌ ಹರ್ಡ್ಸೆ, ದಾಮೋದರ ಹೆಗಡೆ ಮಲ್ಲಾಪುರ, ದೀಪಕ ಭಟ್‌ ಕೂಜಳ್ಳಿ ಹಾಗೂ ಪ್ರೀತಂ ಭಟ್‌ ಕೂಜಳ್ಳಿ ಅವರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಷಡಕ್ಷರಿ ಗವಾಯಿ ಅಕಾಡೆಮಿ ಕೂಜಳ್ಳಿ, ಗಂಧರ್ವ ಕಲಾಕೇಂದ್ರ ಕುಮಟಾ ಹಾಗೂ ಮಲ್ಲಾಪುರ ಗ್ರಾಮಸ್ಥರು ಕೋರಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ