ಯಾದಗಿರಿ: ಆಟೋ ಹತ್ತಿದ ಯುವತಿಯನ್ನು ಬೇರೆಡೆ ಕರೆದೊಯ್ದು ರೇಪ್​-ವೀಡಿಯೋ ಚಿತ್ರೀಕರಿಸಿ ಯುವತಿಗೆ ಬೆದರಿಕೆ:ದೂರು ದಾಖಲು

posted in: ರಾಜ್ಯ | 0

ಯಾದಗಿರಿ: ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಹಾಡಹಗಲೇ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿ ಅದನ್ನು ವೀಡಿಯೋ ಚಿತ್ರೀಕರಿಸಿ ಹೆದರಿಸಿದ ಪೈಶಾಚಿಕ ಕೃತ್ಯ ಯಾದಗಿರಿ ತಾಲೂಕಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಈ ಕುರಿತು ಸಂತ್ರಸ್ತೆ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿಯೊಬ್ಬಳು ಏ.26ರಂದು ಯಾದಗಿರಿ ನಗರಕ್ಕೆ ತೆರಳಲೆಂದು ಎಂ.ಹೊಸಳ್ಳಿ ಗ್ರಾಮದ ಹನುಮಂತ ಎಂಬಾತನ ಆಟೋ ಹತ್ತಿದ್ದಳು. ಈ ವೇಳೆ ಆಟೋ ಚಾಲಕ ತನ್ನ ಸ್ನೇಹಿತನನ್ನೂ ಹತ್ತಿಸಿಕೊಂಡಿದ್ದ.

ಯುವತಿ ಹೇಳಿದ ಸ್ಥಳಕ್ಕೆ ಕರೆದೊಯ್ಯುವ ಬದಲು ಬೇರೆಡೆಗೆ ಆಟೋ ತೆರಳಿದೆ. ಇದನ್ನು ಪ್ರಶ್ನಿಸಿದ ಯುವತಿಗೆ, ಡೀಸೆಲ್​ ಖಾಲಿ ಆಗಿದ್ದರಿಂದ ಹಾಕಿಸಿಕೊಂಡು ಬಳಿಕ ನೀವು ಹೇಳಿದ ಜಾಗಕ್ಕೆ ಕರೆದೊಯ್ಯುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.

ನಗರ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದಲ್ಲಿ ಪಾಳು ಬಿದ್ದ ಮನೆ ಬಳಿಗೆ ಕರೆದೊಯ್ದಿದ್ದಾರೆ. ಯುವತಿ ನಿಮ್ಮ ಕಾಲಿಗೆ ಬೀಳ್ತೇನಿ ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಆಟೋ ಚಾಲಕ ಮತ್ತು ಈತನ ಗೆಳೆಯ ಇಬ್ಬರೂ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಟೋ ಚಾಲಕ ಹನುಮಂತ ಅತ್ಯಾಚಾರವೆಸಗುತ್ತಿದ್ದರೆ, ಈ ದೃಶ್ಯವನ್ನು ಈತನ ಗೆಳೆಯ ನರಸಪ್ಪ ಮೊಬೈಲ್​ನಲ್ಲಿ ಸೆರೆ ಹಿಡಿದು ವಿಕೃತಿ ಮೆರೆದಿದ್ದಾನೆ. ನಂತರ ಯಾರಿಗಾದರೂ ಹೇಳಿದರೆ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ನಂತರ ಯುವತಿ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತ ಯುವತಿಯ ಚಿಕ್ಕಪ್ಪ ಯಾದಗಿರಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ನಂತರ ಆರೋಪಿಗಳಾದ ಹನುಮಂತ ಮತ್ತು ನರಸಪ್ಪನನ್ನು ಬಂಧಿಸಿದ್ದು, ಆಟೋವನ್ನು ಜಪ್ತಿ ಮಾಡಿದ್ದಾರೆ.

ಓದಿರಿ :-   ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ