ಬಸ್ ಅನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು, 69 ವರ್ಷದ ವ್ಯಕ್ತಿಯ ಜೀವ ಉಳಿಸಿದ ಟಿಎನ್‌ಎಸ್‌ಟಿಸಿ ಚಾಲಕ

ತೆಂಕಶಿ (ತಮಿಳುನಾಡು): ಪ್ರಯಾಣದ ವೇಳೆ ಎದೆನೋವು ಕಾಣಿಸಿಕೊಂಡ 69 ವರ್ಷದ ಪ್ರಯಾಣಿಕರೊಬ್ಬರಿಗೆ ಸಮಯೋಚಿತವಾಗಿ ಸಹಾಯ ಮಾಡಿದ ಟಿಎನ್‌ಎಸ್‌ಟಿಸಿ ಬಸ್‌ ಚಾಲಕ ವಿ ಆರುಮುಗಸಾಮಿ ಮತ್ತು ಕಂಡಕ್ಟರ್ ಕೆ ಎಸಕ್ಕಿ ಅಲಿಯಾಸ್ ಕುಟ್ಟಿಸಾಮಿ ಅವರನ್ನು ಸಾರ್ವಜನಿಕರು ಮತ್ತು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಬುಧವಾರ ಸಕಾಲದಲ್ಲಿ ಚಿಕಿತ್ಸೆಗಾಗಿ ಈ ಪ್ರಯಾಣಿಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೂಲಗಳ ಪ್ರಕಾರ, ಸರ್ಕಾರಿ ಬಸ್ ತೆಂಕಶಿ ಮತ್ತು ತಿರುನಲ್ವೇಲಿ ನಡುವೆ ಸಂಚರಿಸುತ್ತಿದ್ದಾಗ ಅತಿಯೂತು ಬಳಿ ಈ ಘಟನೆ ನಡೆದಿದೆ. ಸಾಹುಲ್ ಹಮೀದ್ ಎಂಬ ಪ್ರಯಾಣಿಕ ಇತರ ಪ್ರಯಾಣಿಕರಿಗೆ ತನಗೆ ಎದೆನೋವು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಹಮೀದ್‌ ಅವರನ್ನು ಆಸ್ಪತ್ರೆಗೆ ಕಳುಹಿಸಲು ಪ್ರಯಾಣಿಕರು ತಕ್ಷಣವೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಹಮೀದ್‌ ಅವರ ಸ್ಥಿತಿ ಹದಗೆಟ್ಟಿತ್ತು. ಅಲ್ಲದೆ, ಸುಮಾರು 20-ಕಿಮೀ ದೂರದಲ್ಲಿರುವ ತೆಂಕಶಿಯಿಂದ ಆಂಬ್ಯುಲೆನ್ಸ್ ಸ್ಥಳಕ್ಕೆ ಬರಬೇಕಾಗಿದ್ದರಿಂದ, ಚಾಲಕ ವಿ ಆರುಮುಗಸಾಮಿ ಮತ್ತು ಕಂಡಕ್ಟರ್ ಕುಟ್ಟಿಸಾಮಿ ಪ್ರಯಾಣಿಕರ ಒಪ್ಪಿಗೆಯೊಂದಿಗೆ ಬಸ್ ಅನ್ನು ಅಥಿಯೂತ್ತಿನಿಂದ ಐದು ಕಿಮೀ ದೂರದಲ್ಲಿರುವ ಅಲಂಗುಲಂ ಸರ್ಕಾರಿ ಆಸ್ಪತ್ರೆಗೆ ಓಡಿಸಿದ್ದಾರೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ಆಸ್ಪತ್ರೆ ತಲುಪಿದ ನಂತರ ವಯಸ್ಸಾದ ವ್ಯಕ್ತಿಯನ್ನು ಉಳಿಸಲಾಯಿತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ನಂತರ ಅವರನ್ನು ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೇಳಲಾಗಿದೆ.
ಬಸ್ ಚಾಲಕ ವಿ ಆರುಮುಗಸಾಮಿ ಅವರು ಹಮೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಫೋನ್ ಮೂಲಕ ಅವರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ.
ಹಮೀದ್ ಅವರ ಬಳಿ ಇರುವ ದಾಖಲೆಗಳು ಅವರು ಹೃದ್ರೋಗಿ ಎಂದು ಸೂಚಿಸುತ್ತವೆ. ಈ ಘಟನೆಯಿಂದ ಬಸ್ ಸುಮಾರು 50 ನಿಮಿಷಗಳು ತಡವಾಯಿತು. ಜಿಹೆಚ್ ಕೂಡ ಪಟ್ಟಣದ ಒಳಗೆ ಇದೆ, ರಸ್ತೆ ಬದಿಯಲ್ಲಿಲ್ಲ, ಆದರೆ ಯಾವುದೇ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಲಿಲ್ಲ. ಹಮೀದ್ ಅವರನ್ನು ಆಸ್ಪತ್ರೆಗೆ ಸೇರಿಸಲು ಕಾರಣವಾಯಿತು ಎಂದು ಚಾಲಕನನ್ನು ಉಲ್ಲೇಖಿಸಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement