ಶಾಹಿದ್ ಅಫ್ರಿದಿ ಒಬ್ಬ ಚಾರಿತ್ರ್ಯಹೀನ, ನಕಲಿ ಮನುಷ್ಯ, ನಾನು ಹಿಂದೂ ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಂಡ: ಅಫ್ರಿದಿ ಮೇಲೆ ಪಾಕ್‌ ಕ್ರಿಕೆಟಿಗ ಕನೇರಿಯಾ ಸ್ಫೋಟಕ ಆರೋಪ

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ತಮ್ಮ ಮಾಜಿ ಸಹ ಆಟಗಾರ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ತಾನು ಹಿಂದೂ ಎಂಬ ಕಾರಣಕ್ಕಾಗಿ ಕ್ರಿಕೆಟ್‌ ಆಡುವಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕನೇರಿಯಾ ಅಫ್ರಿದಿಯನ್ನು ಚಾರಿತ್ರ್ಯವಿಲ್ಲದ ನಕಲಿ ಮನುಷ್ಯ ಮತ್ತು ಸುಳ್ಳುಗಾರ ಎಂದು ಕರೆದಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ತನ್ನ ಮೇಲೆ ವಿಧಿಸಲಾದ ಆಜೀವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮನವಿ ಮಾಡಿದರು.

41ರ ಹರೆಯದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಅವರು 2013ರಲ್ಲಿ ತನ್ನ ವಿರುದ್ಧ ಹೊರಿಸಲಾದ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಸುಳ್ಳು, ಆದ್ದರಿಂದ ತನ್ನ ಮೇಲೆ ವಿಧಿಸಲಾದ ನಿಷೇಧವನ್ನು ಹಿಂತೆಗೆದುಕೊಳ್ಳುವ ಮೂಲಕ ತನಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ದನೀಶ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನ ತಂಡವು ಅವರಿಗೆ ಅನ್ಯಾಯ ಮಾಡಿದೆ ಎಂದು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಸಹ ಬಹಿರಂಗಪಡಿಸಿರುವುದು ಗಮನಾರ್ಹವಾಗಿದೆ.
ಸುದ್ದಿ ಸಂಸ್ಥೆ IANS ಜೊತೆ ಮಾತನಾಡಿದ ದನೀಶ ಕನೇರಿಯಾ, ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತನ್ನ ವಿರುದ್ಧ ಪಿತೂರಿ ನಡೆಸಿದರು. ಶಾಹಿದ್ ಅಫ್ರಿದಿ ಯಾವಾಗಲೂ ನನ್ನನ್ನು ನಿರಾಸೆಗೊಳಿಸಿದರು. ಅವರು ನನಗೆ ಅವಕಾಶ ನೀಡಲಿಲ್ಲ ಮತ್ತು ಏಕದಿನ ಅಂತಾರರಾಷ್ಟ್ರೀಯ ಪಂದ್ಯಗಳನ್ನು ಆಡಲು ಬಿಡಲಿಲ್ಲ. ನಾನು ತಂಡದಲ್ಲಿರುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ.
ಶಾಹಿದ್ ಅಫ್ರಿದಿ ನನ್ನ ಉತ್ತಮ ಪ್ರದರ್ಶನದ ಬಗ್ಗೆ ಅಸೂಯೆ ಹೊಂದಿದ್ದರು ಮತ್ತು ಇತರ ಆಟಗಾರರನ್ನು ನನ್ನ ವಿರುದ್ಧ ಕೆರಳಿಸಿದರು ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ನಾನು ಈ ಎಲ್ಲ ವಿಷಯಗಳನ್ನು ನಿರ್ಲಕ್ಷಿಸಿ ಕ್ರಿಕೆಟ್‌ನತ್ತ ಮಾತ್ರ ಗಮನ ಹರಿಸುತ್ತಿದ್ದೆ ಎಂದು ಕನೇರಿಯಾ ಹೇಳಿದ್ದಾರೆ. ಶಾಹಿದ್ ಅಫ್ರಿದಿ ನಾಯಕನಾಗಿರದಿದ್ದರೆ, ಕನೇರಿಯಾ 18 ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗಿಂತ ಹೆಚ್ಚಿನ ಪಂದ್ಯಗಳನ್ನು ಆಡುತ್ತಿದ್ದೆ ಎಂದು ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್‌ನ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಯೊಂದಿಗೆ ನನ್ನ ಹೆಸರು ಸೇರಿಕೊಂಡಿದೆ. ಅವರು ಅಫ್ರಿದಿ ಸೇರಿದಂತೆ ಇತರ ಪಾಕಿಸ್ತಾನಿ ಕ್ರಿಕೆಟಿಗರಿಗೂ ಸ್ನೇಹಿತರಾಗಿದ್ದರು, ಆದರೆ ಅದರಲ್ಲಿ ನನ್ನನ್ನು ಸಿಲುಕಿಸಲಾಯಿತು. ನಾನು ಯಾವುದೇ ರೀತಿಯ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ಮೊದಲ ವ್ಯಕ್ತಿ ಶೋಯೆಬ್ ಅಖ್ತರ್ ಎಂದು ಹೇಳಿರುವ ಕನೇರಿಯಾ, ನಾನು ಹಿಂದೂ ಎಂಬ ಕಾರಣಕ್ಕೆ ಕನೇರಿಯಾ ಅವರನ್ನು ತಂಡದಲ್ಲಿ ಹೇಗೆ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು ಎಂದು ಅಖ್ತರ್ ಬಹಿರಂಗವಾಗಿ ಹೇಳಿದ್ದರು. ನಂತರ ಹಲವಾರು ಅಧಿಕಾರಿಗಳು ಅಖ್ತರ್ ಮೇಲೆ ಒತ್ತಡ ಹೇರಿದರು, ನಂತರ ಅಖ್ತರ್ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

ನಾನು ಶಾಂತಿ ಮತ್ತು ಘನತೆಯಿಂದ ಬದುಕಲು ನನ್ನ ಮೇಲೆ ವಿಧಿಸಿರುವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಪಿಸಿಬಿಗೆ ಮನವಿ ಮಾಡುತ್ತಿದ್ದೇನೆ. ಪಾಕಿಸ್ತಾನದ ಪರ ಆಡುತ್ತಿರುವುದು ಹೆಮ್ಮೆಯ ಸಂಗತಿ. ಅದಕ್ಕಾಗಿ ಪಾಕಿಸ್ತಾನಿ ಕ್ರಿಕೆಟ್‌ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಲವು ಫಿಕ್ಸರ್ ಗಳ ಮೇಲಿನ ನಿಷೇಧ ಹಿಂಪಡೆದಿದ್ದು, ಇತರ ಆಟಗಾರರಂತೆ ಅವರಿಗೂ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
2012 ರಲ್ಲಿ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಪ್ರೊ-ಲೀಗ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿದ ಎರಡು ಆರೋಪಗಳ ಮೇಲೆ ದನೀಶ ಕನೇರಿಯಾ ಅವರನ್ನು ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಎಲ್ಲಾ ಕ್ರಿಕೆಟ್‌ನಿಂದ ಆಜೀವ ನಿಷೇಧಿಸಿತು. ಇದರ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅವರನ್ನು ಅಮಾನತುಗೊಳಿಸಿತು.
ಕನೇರಿಯಾ ಅವರು ತಮ್ಮ 62 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್‌ಗಳನ್ನು ಮತ್ತು ತಮ್ಮ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement