ತಾವರಗಟ್ಟಿ ಗ್ರಾಮದ ಅದಿತಿ, ಶಿವಾಜಿ ಇಟಗೇಕರ ಎಂಬುವರ ಪುತ್ರಿ ಆದಿತಿ ಅಜ್ಜಿ ಮನೆಗೆ ಬಂದಿತ್ತು. ಮನೆ ಬಳಿ ಆಟವಾಡುತ್ತಿದ್ದ ಮಗು ಏಕಾಏಕಿ ನಾಪತ್ತೆಯಾಗಿತ್ತು.
ಬೆಳಗಾವಿ: ನಾಲ್ಕು ದಿನಗಳ ಹಿಂದೆ ತಾಲೂಕಿನ ಜಾಂಬೋಟಿ ಹೋಬಳಿಯ ಚಿರೇಖಾನಿ ಗ್ರಾಮದ ತನ್ನ ಅಜ್ಜಿಯ ಮನೆಯ ಬಳಿ ಆಟವಾಡುವಾಗ ನಾಪತ್ತೆಯಾಗಿದ್ದ 3 ವರ್ಷದ ಹೆಣ್ಣು ಮಗು ಶನಿವಾರ ಸಂಜೆ ಸುಮಾರು 3 ಕಿ.ಮೀ. ದೂರದ ದಟ್ಟ ಅರಣ್ಯದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಏಪ್ರಿಲ್ 26ರಂದು ತಾಲೂಕಿನ ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ ಅವರು ತಮ್ಮ ಪತ್ನಿ ಹಾಗೂ 3 ವರ್ಷ ವಯಸ್ಸಿನ ಪುತ್ರಿ ಅದಿತಿ ಜೊತೆ ಕಳೆದ ವಾರ ಚಿರೇಖಾನಿ ಗ್ರಾಮದ ತಮ್ಮ ಹೆಂಡತಿಯ ತವರು ಮನೆಗೆ ಬಂದಿದ್ದರು. ಮಂಗಳವಾರ ಮಧ್ಯಾಹ್ನ ಚಿರೇಖಾನಿಯ ತನ್ನ ಅಜ್ಜಿಯ ಮನೆಯ ಬಳಿ ಆಟವಾಟುತ್ತಿದ್ದ ಅದಿತಿ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಳು.
ಚಿರೇಖಾನಿ ಗ್ರಾಮಸ್ಥರು ಮತ್ತು ಶಿವಾಜಿ ಕುಟುಂಬದ ಸದಸ್ಯರು ಬಾಲಕಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದಿದ್ದಾಗ ಏಪ್ರಿಲ್ 29ರಂದು ಖಾನಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಚಿರೇಖಾನಿ ಸುತ್ತಮುತ್ತಲಿನ ಗ್ರಾಮಗಳು ಮತ್ತು ಅರಣ್ಯ ಪ್ರದೇಶದಲ್ಲಿ ಮಗುವಿಗಾಗಿ ಶೋಧ ನಡೆಸಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಜಾಂಬೋಟಿ ಅರಣ್ಯದಲ್ಲಿಯೂ ಹುಡುಕಾಟ ನಡೆಸುವಾಗ ಮರವೊಂದರ ಕೆಳಗೆ ನಿತ್ರಾಣ ಸ್ಥಿತಿಯಲ್ಲಿ ಮಗು ಅದಿತಿ ಪತ್ತೆಯಾಗಿದೆ. ತಕ್ಷಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಿ ಬಾಲಕಿ ಚೇತರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ಮಗು ದಟ್ಟ ಅರಣ್ಯಕ್ಕೆ ಹೋಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ