ಮೇ 4ರ ನಂತರ ಮಹಾರಾಷ್ಟ್ರದ ಶಕ್ತಿ ನಿಮಗೆ ತೋರಿಸ್ತೇನೆ: ಧ್ವನಿವರ್ಧಕದ ಗಡುವು ಸಮೀಪಿಸಿದಂತೆ ಗುಡುಗಿದ ರಾಜ್ ಠಾಕ್ರೆ

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಾನುವಾರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ, ಮೇ 4 ರೊಳಗೆ ಮಹಾರಾಷ್ಟ್ರದ ಮಸೀದಿಗಳಲ್ಲಿನ ಎಲ್ಲಾ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಹನುಮಾನ್ ಚಾಲೀಸಾವನ್ನು ಮುಂದೆ ‘ಡಬಲ್ ಪವರ್’ ನಲ್ಲಿ ನುಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮೇ 3 ರಂದು ಈದ್ ಇದೆ, ಹಬ್ಬಕ್ಕೆ ತೊಂದರೆ ಮಾಡಲು ನಾನು ಬಯಸುವುದಿಲ್ಲ, ಆದರೆ ಮೇ 4 ರ ನಂತರ ನಾವು ಕೇಳುವುದಿಲ್ಲ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಡಬಲ್ ಪವರ್‌ನಿಂದ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದಲ್ಲಿ ಕೇಳಿಸುತ್ತೇವೆ. ನಮ್ಮ ಮನವಿಗೆ ಸ್ಪಂದಿಸಿ ನೀವು ಮಾಡದಿದ್ದರೆ ನಾವು ಅದನ್ನು ನಮ್ಮ ರೀತಿಯಲ್ಲಿ ನಿಭಾಯಿಸುತ್ತೇವೆ. ನಾನು ಮೇ 4 ರಿಂದ ಮೌನವಾಗಿರುವುದಿಲ್ಲ. ಅಲ್ಲಿಯವರೆಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ಮಹಾರಾಷ್ಟ್ರದ ಶಕ್ತಿಯನ್ನು ನಿಮಗೆ ತೋರಿಸುತ್ತೇನೆ ಎಂದು ಹೇಳಿದ್ದಾರೆ.
“ನಮ್ಮ ಬೇಡಿಕೆಗಳನ್ನು ಪರಿಹರಿಸದಿದ್ದರೆ ಮಹಾರಾಷ್ಟ್ರದಲ್ಲಿ ಏನಾಗುತ್ತದೆ ಎಂಬುದಕ್ಕೆ ನಾವು ಜವಾಬ್ದಾರರಲ್ಲ, ಇದು ಧಾರ್ಮಿಕ ವಿಷಯವಲ್ಲ, ಸಾಮಾಜಿಕ ಸಮಸ್ಯೆ ಎಂದು ನಾನು ಪುನರುಚ್ಚರಿಸುತ್ತಿದ್ದೇನೆ ಆದರೆ ನೀವು ಅದನ್ನು ಧಾರ್ಮಿಕ ವಿಷಯ ಮಾಡಿದರೆ, ನಾವು ಅದೇ ರೀತಿಯಲ್ಲಿ ಉತ್ತರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್ ಮರುಮೌಲ್ಯಮಾಪನದ ಅರ್ಜಿ ತಿರಸ್ಕರಿಸಿದ ನಂತರ ಕಾಂಗ್ರೆಸ್ಸಿಗೆ 1700 ಕೋಟಿ ತೆರಿಗೆ ನೋಟಿಸ್ ನೀಡಿದ ಐಟಿ : ಮೂಲಗಳು

ಮಹಾರಾಷ್ಟ್ರದಲ್ಲಿ ಧ್ವನಿವರ್ಧಕಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ. ನಾಸಿಕ್‌ನ ಮುಸ್ಲಿಂ ಪತ್ರಕರ್ತರೊಬ್ಬರು ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದಾಗಿ ತಮ್ಮ ಮಗುವಿಗೆ ತೊಂದರೆಯಾಗಿದೆ ಎಂದು ನನಗೆ ಹೇಳಿದ್ದಾರೆ.. ಉತ್ತರ ಪ್ರದೇಶವು ಧ್ವನಿವರ್ಧಕಗಳನ್ನು ತೆಗೆದುಹಾಕಲು ಸಾಧ್ಯವಾದರೆ ಮಹಾರಾಷ್ಟ್ರ ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು.

ಎಲ್ಲಾ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು, ಆದರೆ ಅವುಗಳನ್ನು ಮಸೀದಿಗಳಲ್ಲಿ ತೆಗೆದ ನಂತರವೇ ತೆಗೆಯುವುದು ಎಂದು ಅವರು ಹೇಳಿದರು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನನ್ನ ಭಾಷಣಗಳು ಸಮಾಜವನ್ನು ವಿಭಜಿಸುತ್ತಿವೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ. ಜಾತಿ ವಿಭಜನೆಗೆ ಪವಾರ್ ಅವರೇ ಕಾರಣ ಎಂದು ನಾನು ಹೇಳಲು ಬಯಸುತ್ತೇನೆ” ಎಂದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement