24 ಗಂಟೆಯಲ್ಲಿ ಪಾಕ್ ಪ್ರಧಾನಿಗೆ ಎರಡು ಬಾರಿ ಅವಮಾನ: 17 ಭದ್ರತಾ ಸಿಬ್ಬಂದಿ ವಜಾ

ದುಬೈ: ಇತ್ತೀಚೆಗಷ್ಟೇ ಪಾಕಿಸ್ತಾನದ ನೂತನ ಪ್ರಧಾನಿಯಾಗಿರುವ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಅಪಮಾನವಾದ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಕಾರಣದಿಂದ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್ ಮೂಲದ ಕೆಲವರು ಅವರಿಗೆ ಅವಮಾನ ಮಾಡಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಪಾಕ್ ಪ್ರಧಾನಿಗೆ ಅಪಮಾನ ಆಗಿದೆ.
ಶಹಾಬಾಜ್ ನಡೆದು ಬರುತ್ತಿದ್ದ ವೇಳೆ, ಜನರು ಅವರಿಗೆ `ಕಳ್ಳ- ಕಳ್ಳ’, ಪಾಕಿಸ್ತಾನಿ ವಿರೋಧಿ, ಶೆಹಾಬಾಜ್ ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದೆಲ್ಲ ಕೂಗಿದ್ದಾರೆ.

2ನೇ ಬಾರಿಗೆ ಶಹಾಬಾಜ್ ಷರೀಫ್ ಭಾರೀ ಭದ್ರತೆಯಲ್ಲಿ ಪ್ರವೇಶಿಸಿದ್ದು, ಈ ವೇಳೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಆದರೂ ಜನರು ತಾವಿದ್ದಲ್ಲಿಂದಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಕೆಳಗಿಳಿಸಿ ಶಹಾಬಾಜ್ ಹೇಗೆ ಪ್ರಧಾನಿಯಾದರು ಎಂಬುದರ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದು ಅಪಮಾನ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement