ಕುಮಟಾ: ಜಿಪಂ ಸದಸ್ಯ, ವಕೀಲರ ಸಂಘದ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

ಕುಮಟಾ; ತಾಲೂಕಿನ ಬಾಡದವರಾದ ಜಿಲ್ಲಾಪ ಪಂಚಾಯತ ಸದಸ್ಯ ರತ್ನಾಕರ ನಾಯ್ಕ ಮತ್ತು ಕುಮಟಾದ ವಕೀಲರ ಸಂಘದ ಅಧ್ಯಕ್ಷರಾದ ಆರ್.ಜಿ.ನಾಯ್ಕ ಅವರು ಪ್ರಯಾಣಿಸುತ್ತಿರುವ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಸಂಜೆ ಕುಂದಾಪುರದ ಸಮೀಪದ ನಾವುಂದದಲ್ಲಿ ಕಾರು ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇಬ್ಬರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಕೀಲರಾದ ಆರ್.ಜಿ.ನಾಯ್ಕ ಅವರ ಕೈಗೆ ಪೆಟ್ಟಾಗಿದೆ, ಯಾವುದೇ ಪ್ರಾಣಾಪಾಯವಿಲ್ಲ ಎಂದು ಮಾಹಿತಿ ಬಂದಿದೆ ಎಂದು ಕುಮಟಾ ಪಿಎಸ್ಐ ನವೀನ ನಾಯ್ಕ ಮಾಹಿತಿ ನೀಡಿದ್ದಾರೆ.
ಕಾರು ತೀವ್ರವಾಗಿ ಹಾನಿಗೊಳಗಾಗಿದ್ದು ಇಬ್ಬರು ಕುಮಟಾದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.7 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ