ಚಲಿಸುತ್ತಿರುವ ವಿಮಾನದಲ್ಲಿ 37,000 ಅಡಿಗಳಷ್ಟು ಎತ್ತರದಲ್ಲಿ ಮದುವೆಯಾದ ಜೋಡಿ…!

ನ್ಯೂಯಾರ್ಕ್​: ಬಹು ದಿನಗಳ ತಮ್ಮ ಕನಸಿನಂತೆ ಜೋಡಿಯೊಂದು ತಮ್ಮ ಮದುವೆಯನ್ನು ವಿಮಾನದಲ್ಲಿ ಮಾಡಿಕೊಂಡಿದ್ದಾರೆ.
ಅಮೆರಿಕದ ಒಕ್ಲಾಹೊಂ ನಗರದ ಈ ಜೋಡಿ ಚಲಿಸುತ್ತಿರುವ ವಿಮಾನದಲ್ಲಿ ವಿವಾಹವಾಗಿದ್ದು, ಇವರ ವಿಶಿಷ್ಟ ಮದುವೆಗೆ ಅನೇಕರು ಸಾಕ್ಷಿಯಾಗಿದ್ದಾರೆ.
ಪಾಮ್​ ಪ್ಯಾಟರ್​ಸನ್​ ಮತ್ತು ಜೆರಿಮಿ ಸಾಲ್ಡಾ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಪಾಮ್​ ತನ್ನ ಗೆಳತಿ ಆಸೆಯಂತೆ ತಮ್ಮಿಬ್ಬರ ಮದುವೆ ದಿನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಮಾನದಲ್ಲಿ ಮದುವೆಯಾಗುವ ಮೂಲಕ ಉಡುಗೊರೆ ನೀಡಿದ್ದಾರೆ.

ಅಮೆರಿಕಾದ ಸಾಲ್ಡಾ ಮತ್ತು ಪಾಮ್ ಪ್ಯಾಟರ್ಸನ್ ಡಲ್ಲಾಸ್‌ನಿಂದ ಲಾಸ್ ವೇಗಾಸ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ವಿವಾಹವಾಗಿದ್ದಾರೆ. ಆದರೆ ಹೀಗೆ ವಿಮಾನದಲ್ಲಿ ಮದುವೆಯಾಗಬೇಕು ಎಂದು ಅವರೇನೂ ಮೊದಲೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಆ ಜೋಡಿ ಲಾಸ್ ವೇಗಾಸ್‌ನಲ್ಲಿ ಚರ್ಚ್​ನಲ್ಲಿಯೇ ಸರಳವಾಗಿ ವಿವಾಹವಾಗಲು ಬಯಸಿದ್ದರು. ಅವರು ತಮ್ಮ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಹೋಗುತ್ತಿದ್ದಾಗ, ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಲೇಓವರ್ ಮಾಡುವಾಗ ಇಬ್ಬರೂ ತೊಂದರೆಗೆ ಸಿಲುಕಿದರು.

ದಂಪತಿ ಲಾಸ್ ವೇಗಾಸ್‌ನಲ್ಲಿ ರಾತ್ರಿ 9 ಗಂಟೆಗೆ ವಿವಾಹ ಚಾಪೆಲ್ ಅನ್ನು ಬುಕ್ ಮಾಡಿದ್ದರು. ಆದರೆ, ಮದುವೆಯ ದಿನ ಅವರು ತೆರಳಬೇಕಾಗಿದ್ದ ವಿಮಾನ ವಿಳಂಬವಾಯಿತು. ಕೊನೆಗೆ ಅವರು ತೆರಳಬೇಕಿದ್ದ ವಿಮಾನವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಹೀಗಾಗಿ, ವೇಗಾಸ್‌ಗೆ ಪ್ರಯಾಣಿಸಲು ಯೋಜಿಸುತ್ತಿದ್ದ ಸಾಲ್ಡಾ ಜೋಡಿ ಟರ್ಮಿನಲ್‌ನಲ್ಲಿ ಸಿಲುಕಿಕೊಂಡರು. ಕೊನೆಗೆ ಅದೇ ಟರ್ಮಿನಲ್​ನಲ್ಲಿದ್ದ ಮಂತ್ರಿಗಳ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡ ಅವರಿಗೆ ಆ ಮಂತ್ರಿ ವಿಮಾನದಲ್ಲೇ ಮದುವೆಯಾಗಿ ಎಂಬ ಸಲಹೆ ಕೊಟ್ಟರು.

ಕ್ರಿಸ್ ಕೂಡ ದೀಕ್ಷೆ ಪಡೆವರಾಗಿದ್ದರು ಮತ್ತು ದಂಪತಿಯನ್ನು ಮದುವೆ ಮಾಡಲು ಸ್ವತಃ ಮುಂದಾದರು! ಮೂವರು ಆನ್‌ಲೈನ್‌ಗೆ ಹೋದರು, ಅದೃಷ್ಟವಶಾತ್, ಅವರು ಸೌತ್‌ವೆಸ್ಟ್ ಏರ್‌ಲೈನ್ಸ್ ಫ್ಲೈಟ್ 2690 ನಲ್ಲಿ ಮೂರು ಆಸನಗಳನ್ನು ಹುಡುಕುವಲ್ಲಿ ಯಶಸ್ವಿಯಾದರು. ಅದರಂತೆ ಆ ದಂಪತಿಗಳು ವೆಗಾಸ್‌ಗೆ ವಿಮಾನವನ್ನು ಬುಕ್ ಮಾಡಿದರು. ತಮ್ಮ ಮದುವೆಯ ಡ್ರೆಸ್ ಧರಿಸಿ, ವಿಮಾನದಲ್ಲಿ ಸಾಗಿದರು. ವಿಮಾನ ಸಿಬ್ಬಂದಿಯ ಸದಸ್ಯರು ಪೇಪರ್ ರೋಲ್‌ಗಳಿಂದ ಒಳಾಂಗಣವನ್ನು ಅಲಂಕರಿಸಿದರು ಮತ್ತು ಮೂಡ್ ಲೈಟಿಂಗ್ ಕೂಡ ಹಾಕಿದರು. ಸಾಲ್ಡಾ ವಿಮಾನದ ಎರಡೂ ಬದಿಯ ಸೀಟಉಗಳ ಮಧ್ಯೆ ನಡೆಯುತ್ತಿದ್ದಂತೆ ಓರ್ವ ಗಗನಸಖಿ ವಧುವಿನ ದಾಸಿಯಾಗಿ ನಿಂತಿದ್ದಳು.ಮಂತ್ರಿ
ವಿಮಾನದಲ್ಲಿದ್ದ ಪ್ರಯಾಣಿಕರ ಸಮ್ಮುಖದಲ್ಲಿ ಅವರಿಬ್ಬರೂ 37,000 ಅಡಿ ಎತ್ತರದಲ್ಲಿ ವಿಮಾನದಲ್ಲೇ ಮದುವೆಯಾದರು. ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಅವರ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement