ಬೆಕ್ಕಿಗೆ ಹಾಲು ಕುಡಿಯುವ ಆಸೆಯಾಗಿತ್ತು, ಅದಕ್ಕಾಗಿ ಏನು ಮಾಡ್ತು ನೋಡಿ…

posted in: ರಾಜ್ಯ | 0

ಬೆಕ್ಕಿನ ಕೆಲವೊಂದು ತಮಾಷೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಈಗ ಅಂಥದ್ದೇ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ಗೋಪಾಲಕನೊಬ್ಬ ಹಸುವಿನ ಹಾಲು ಕರೆಯುತ್ತಿದ್ದಾನೆ. ಅದೇ ವೇಳೆಗೆ ಬೆಕ್ಕು ಬಂದಿದೆ. ಹಾಲನ್ನು ನೋಡಿ ಬೆಕ್ಕಿಗೂ ಕುಡಿಯುವ ಆಸೆಯಾಗಿದ್ದು, ಹಸಿದ ಬೆಕ್ಕು ಗೋಪಾಲಕನಿಗೆ ತನಗೆ ಹಾಲು ನೀಡುವಂತೆ ಸನ್ನೆ ಮಾಡುತ್ತದೆ. ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ ಕೆಚ್ಚಲುವಿನಿಂದ ನೆರವಾಗಿ ಬೆಕ್ಕಿಗೆ ಹಾಲು ಕುಡಿಸುತ್ತಾನೆ. ಈ ಮುದ್ದಾದ ವಿಡಿಯೋ ನೋಡಿದ ಬಳಕೆದಾರರು ಬೆಕ್ಕಿನ ಪ್ರತಿಕ್ರಿಯೆಗೆ ನಕ್ಕಿದ್ದಾರೆ. .

14ನೇ ಜೂನ್ 2021 ರಂದು, ತಾಜಾ ಪೂರ್ಣ ಕೆನೆ ಹಾಲು ಎಂಬ ಶೀರ್ಷಿಕೆಯ 1-ನಿಮಿಷದ ವೀಡಿಯೊವನ್ನು ಡಿನ್ ಸಿನ್ಸಿನ್ ಎನ್ನುವ ಫೇಸ್‌ಬುಕ್ ಖಾತೆ ಪೋಸ್ಟ್ ಮಾಡಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಹಸುವಿನ ಹಾಲು ಕರೆಯುವುದರಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ಬೆಕ್ಕು ತನ್ನ ಕಾಲಿನಿಂದ ತಟ್ಟಿ ತನಗೆ ಹಾಲು ನೀಡುವಂತೆ ಕೇಳುವ ಕ್ಷಣವನ್ನು ಸೆರೆಹಿಡಿಯಲಾಗಿದೆ.

ಬೆಕ್ಕು ತನ್ನ ಕಾಲಿಗೆ ಎರಡು ಬಾರಿ ತಟ್ಟಿದಾಗ, ಆ ವ್ಯಕ್ತಿ ಹಸುವಿನ ಹಾಲನ್ನು ಬೆಕ್ಕಿ ನೀಡುತ್ತಾನೆ. ಆದರೆ ತನಗೆ ಸಾಲದು ಎಂದು ಹೆಚ್ಚಿನ ಹಾಲಿಗಾಗಿ ಮತ್ತೊಮ್ಮೆ ಮನುಷ್ಯನ ಕಾಲಿಗೆ ಮತ್ತೆ ಬಡಿಯುತ್ತದೆ. ಆತ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಅದಕ್ಕೆ ಹಾಲು ಕುಡಿಸುತ್ತಾನೆ.

ಓದಿರಿ :-   ಪರಿಷತ್ ಚುನಾವಣೆ : ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಿದ ಜೆಡಿಎಸ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ