ಪಿಎಸ್‍ಐ ನೇಮಕ ಪರೀಕ್ಷೆ ಅಕ್ರಮ: ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

posted in: ರಾಜ್ಯ | 0

ಬೆಂಗಳೂರು: ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್‍ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ನಗರ ಪೊಲೀಸ್ ಕಮಿಷನ್‍ರೇಟ್‍ನ ಬೆರಳಚ್ಚು ವಿಭಾಗದ ಡಿಎಸ್ಪಿ ಆರ್.ಆರ್.ಹೊಸಮನಿ ಮತ್ತು ಮಹಿಳಾ ಠಾಣೆಯ ಪಿ.ಐ. ದಿಲೀಪ್ ಸಾಗರ ಅವರನ್ನು ಅಮಾನತು ಮಾಡಿ ಸರ್ಕಾರ ಬುಧವಾರ ರಾತ್ರಿ ಆದೇಶ ಹೊರಡಿಸಿದೆ.

ಇಬ್ಬರು ಅಧಿಕಾರಿಗಳು ಅಂದು ಪರೀಕ್ಷಾ ಕೇಂದ್ರದ ಉಸ್ತುವಾರಿಗಳಾಗಿದ್ದರು. ಇಷ್ಟೊಂದು ಅಕ್ರಮ ನಡೆದಿದ್ದು ಗಮನಿಸದೆ ಕರ್ತವ್ಯ ನಿರ್ಲಕ್ಸ್ಯ ಮಾಡಿದ ಕಾರಣದಿಂದ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ನಡೆದ ಪಿಎಸ್‌ಐ ಅಕ್ರಮದ ತನಿಖೆ ಮುಂದುವರಿದ ಬೆನ್ನಲ್ಲೇ ಪೊಲೀಸ್ ಇಲಾಖೆಯವರೇ ಬಲೆಗೆ ಬೀಳುತ್ತಿದ್ದಾರೆ. ಇನ್‌ ಸರ್ವೀಸ್‌ ಕೋಟಾದಲ್ಲಿ ಪರೀಕ್ಷೆ ಬರೆದು ಅಕ್ರಮ ಎಸಗಿದ್ದ ಶಾಸಕರೊಬ್ಬರ ಗನ್‌ಮ್ಯಾನ್‌ ಈಗಾಗಲೇ ಬಂಧಿತನಾಗಿದ್ದು, ವಿವಿಐಪಿ ಭದ್ರತಾ ವಿಭಾಗದ ಕಾನ್ಸ್‌ಟೇಬಲ್ ಅರೆಸ್ಟ್‌ ಆಗಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಬಾಗಲಕೋಟೆ: ತಲೆಗೂದಲಿಗೆ ಬಣ್ಣ ಹಾಕುವ ದರದ ವಿಚಾರದಲ್ಲಿ ಜಗಳ, ಗ್ರಾಹಕನ ಎದೆಗೆ ಇರಿದು ಕೊಲೆ ಮಾಡಿದ ಕ್ಷೌರಿಕ
advertisement

ನಿಮ್ಮ ಕಾಮೆಂಟ್ ಬರೆಯಿರಿ